ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ವೆಲ್ಸ್‌: ಸೆಮಿಫೈನಲ್‌ಗೆ ಕ್ಯಾಮರಾನ್ ನೋರಿ

Last Updated 15 ಅಕ್ಟೋಬರ್ 2021, 12:10 IST
ಅಕ್ಷರ ಗಾತ್ರ

ಇಂಡಿಯನ್ ವೆಲ್ಸ್‌: ಅರ್ಜೆಂಟೀನಾದ ಡೀಗೊ ಸ್ವಾಟ್ಸ್‌ಮನ್‌ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಬ್ರಿಟನ್‌ನ ಕ್ಯಾಮರಾನ್ ನೋರಿ ಅವರು ಬಿಎನ್‌ಪಿ ಪರಿಬಾಸ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.

ಇಂಡಿಯನ್ ವೆಲ್ಸ್‌ ಟೆನಿಸ್ ಗಾರ್ಡನ್‌ನಲ್ಲಿ ಗುರುವಾರ ರಾತ್ರಿ ನಡೆದ ಎಂಟರ ಘಟ್ಟದ ಹಣಾಹಣಿಯಲ್ಲಿ ನೋರಿ 11ನೇ ಶ್ರೇಯಾಂಕದ ಎದುರಾಳಿಯನ್ನು6-0, 6-2ರಲ್ಲಿ ಮಣಿಸಿದರು. 73 ನಿಮಿಷಗಳಲ್ಲಿ ನೋರಿ ಜಯ ಗಳಿಸಿದರು. ಎರಡನೇ ಸೆಟ್‌ನಲ್ಲಿ ಮಾತ್ರ ಸ್ವಾಟ್ಸ್‌ಮನ್‌ ಸ್ವಲ್ಪ ಪ್ರತಿರೋಧ ಒಡ್ಡಿದರು.

ಮಹಿಳೆಯರ ವಿಭಾಗದಲ್ಲಿ ಟುನೀಷಿಯಾದ 12ನೇ ಶ್ರೇಯಾಂಕಿತೆ ಒನ್ಸ್ ಜಬೆವುರ್7-5, 6-3ರಲ್ಲಿ ಎಸ್ಟೋನಿಯಾದ ಅನೆಟ್ ಕೊಂಟಾವೇಟ್ ವಿರುದ್ಧ ಜಯ ಗಳಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು. ಈ ಫಲಿತಾಂಶದೊಂದಿಗೆ ಜಬೆವುರ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಬಾರಿ ಅಗ್ರ 10ರ ಒಳಗೆ ಸ್ಥಾನ ಗಳಿಸುವತ್ತ ಹೆಜ್ಜೆ ಹಾಕಿದ್ದಾರೆ. ಟೂರ್ನಿಯಲ್ಲಿ ಚಾಂಪಿಯನ್ ಆದರೆ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನ ಗಳಿಸುವ ಸಾಧ್ಯತೆ ಇದೆ.

ಈಚೆಗೆ ನಡೆದ ಚಿಕಾಗೊ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದ ಜಬೆವುರ್ ಅವರಿಗೆ ಈ ವರ್ಷ ಡಬ್ಲ್ಯುಟಿಎ ಟೂರ್‌ನಲ್ಲಿ ಇದು 48ನೇ ಜಯವಾಗಿದೆ. ಜಬೆವುರ್ ಮತ್ತು ಕೊಂಟಾವೇಟ್ ನಾಲ್ಕು ಬಾರಿ ಮುಖಾಮುಖಿಯಾಗಿದ್ದು ಮೂರು ಬಾರಿ ಜಬೆವುರ್ ಜಯ ಗಳಿಸಿದ್ದಾರೆ. ಆಗಸ್ಟ್‌ನಲ್ಲಿ ನಡೆದ ಸಿನ್ಸಿನಾಟಿ ಟೂರ್ನಿಯಲ್ಲಿ ಜಬೆವುರ್ ವಿರುದ್ಧ ಸೋಲುವ ಮುನ್ನ ಕೊಂಟಾವೇಟ್ ಆಡಿದ 17 ಪಂದ್ಯಗಳ ಪೈಕಿ 16ರಲ್ಲಿ ಗೆದ್ದಿದ್ದರು. ಎರಡು ಪ್ರಶಸ್ತಿ ಕೂಡ ಗೆದ್ದುಕೊಂಡಿದ್ದರು. 14 ಪಂದ್ಯಗಳಲ್ಲಿ ನೇರ ಸೆಟ್‌ಗಳ ಜಯ ಸಾಧಿಸಿದ್ದರು.

ಮಹಿಳೆಯರ ವಿಭಾಗದ ಮತ್ತೊಂದು ಪಂದ್ಯದಲ್ಲಿ ಜರ್ಮನಿಯ ಏಂಜೆಲಿಕ್ ಕರ್ಬರ್‌ ಅವರನ್ನು ಸ್ಪೇನ್‌ನ ಪೌಲಾ ಬಡೋಸ6-4, 7-5ರಲ್ಲಿ ಮಣಿಸಿದರು. 2019ರ ರನ್ನರ್ ಅಪ್‌ ಕೆರ್ಬರ್ 10ನೇ ಶ್ರೇಯಾಂಕದ ಆಟಗಾರ್ತಿಗೆ ಕಠಿಣ ಪೈಪೋಟಿ ಒಡ್ಡಿದರೂ ಗೆಲುವು ಸಾಧಿಸಲು ಆಗಲಿಲ್ಲ.

ಬೋಪಣ್ಣ‍–ಶಪೊವಲೊವ್ ಜೋಡಿಗೆ ಸೋಲು

ಭಾರತದ ರೋಹನ್ ಬೋಪಣ್ಣ ಮತ್ತು ಕೆನಡಾದ ಡೆನಿಸ್ ಶಪೊವಲೊವ್ ಜೋಡಿ ಪುರುಷರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದರು. ಒಂದು ತಾಸು ಮತ್ತು ಆರು ನಿಮಿಷ ನಡೆದ ಜಿದ್ದಾಜಿದ್ದಿಯ ಹಣಾಹಣಿಯಲ್ಲಿ ಬೋಪಣ್ಣ–ಶಪೊವಲೊವ್ ಅವರನ್ನು ರಷ್ಯಾದ ಆ್ಯಂಡ್ರೆ ರುಬ್ಲೆವ್ ಮತ್ತು ಅಸ್ಲಾನ್‌ ಕರತ್ಸೆವ್ ಜೋಡಿ4-6, 4-6ರಲ್ಲಿ ಸೋಲಿಸಿತು.

ಶ್ರೇಯಾಂಕ ರಹಿತ ಭಾರತ–ಕೆನಡಾ ಜೋಡಿ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಜರ್ಮನಿಯ ಜಾನ್ ಲೆನಾರ್ಡ್‌ ಮತ್ತು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಅಲೆಕ್ಸಾಂಡರ್ ಜ್ವೆರೆವ್ ಜೋಡಿಯನ್ನು ನೇರ ಸೆಟ್‌ಗಳಿಂದ ಮಣಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT