ಮಂಗಳವಾರ, ಫೆಬ್ರವರಿ 18, 2020
24 °C

ಎಟಿಕೆ, ಬ್ಲಾಸ್ಟರ್ಸ್ ಕೋಚ್‌ಗಳಿಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಂದ್ಯದ ಸಂದರ್ಭದಲ್ಲಿ ಅಶಿಸ್ತಿನಿಂದ ವರ್ತಿಸಿದ ಎಟಿಕೆ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳ ಕೋಚ್‌ಗಳಿಗೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ನೋಟಿಸ್ ಜಾರಿಗೊಳಿಸಿದೆ.

ಜನವರಿ 12ರಂದು ಕೋಲ್ಕತ್ತದಲ್ಲಿ ನಡೆದಿದ್ದ ಉಭಯ ತಂಡಗಳ ನಡುವಿನ ಪಂದ್ಯದ ಸಂದರ್ಭದಲ್ಲಿ ಎಟಿಕೆ ಕೋಚ್‌ ಆ್ಯಂಟೊನಿಯೊ ಲೋಪೆಜ್ ಹಬಾಜ್, ಕೇರಳ ಬ್ಲಾಸ್ಟರ್ಸ್ ಕೋಚ್ ಎಲ್ಕೊ ಶೆಟೋರಿ ಮತ್ತು ಎಟಿಕೆಯ ಗೋಲ್‌ಕೀಪಿಂಗ್ ಕೋಚ್‌ ಏಂಜೆಲ್ ಪಿಂಡಾನೊ ಅಶಿಸ್ತು ತೋರಿದ್ದರು. ಹೀಗಾಗಿ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಐಎಸ್‌ಎಲ್ ಮೀಡಿಯಾದ ಪ್ರಕಟಣೆ ತಿಳಿಸಿದೆ.

ಏಂಜೆಲ್ ಪಿಂಡಾನೊ ಅವರನ್ನು ಪಂದ್ಯ ಮುಗಿದ ಕೂಡಲೇ ಎಐಎಫ್‌ಎಫ್‌ ಶಿಸ್ತು ಸಮಿತಿ ಅಮಾನತುಗೊಳಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು