ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕಪ್‌ ಫುಟ್‌ಬಾಲ್‌ ಸಂಭ್ರಮದ ಬೆನ್ನಲ್ಲೇ ಕಾರ್ಮೊನಾಗೆ ತಂದೆ ನಿಧನದ ವಾರ್ತೆ

Published 21 ಆಗಸ್ಟ್ 2023, 15:41 IST
Last Updated 21 ಆಗಸ್ಟ್ 2023, 15:41 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌: ಫೀಫಾ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಫೈನಲ್‌ನಲ್ಲಿ ಗೋಲು ಹೊಡೆದು ಸ್ಪೇನ್ ಗೆಲುವಿನ ರೂವಾರಿಯಾದ ಓಲ್ಗಾ ಕಾರ್ಮೊನಾ ಅವರ ತಂದೆ ಭಾನುವಾರ ಮೃತಪಟ್ಟಿದ್ದರು. ಆದರೆ ತಂದೆ ನಿಧನರಾದ ವಿಷಯನ್ನು ಪ್ರಶಸ್ತಿ ಸಂಭ್ರಮದ ನಂತರವಷ್ಟೇ ಅವರಿಗೆ ತಿಳಿಸಲಾಯಿತು ಎಂದು ಸ್ಪ್ಯಾನಿಷ್‌ ಫುಟ್‌ಬಾಲ್‌ ಫೆಡರೇಷನ್‌ ತಿಳಿಸಿದೆ.

ಜೋಸ್‌ ವೆರ್ಡಾಸ್ಕೊ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಪತ್ನಿಯು, ಮಗಳು ಫೈನಲ್‌ನಲ್ಲಿ ಆಡುವುದನ್ನು ನೋಡಲು ಆಸ್ಟ್ರೇಲಿಯಾಕ್ಕೆ ಹೋಗಿದ್ದರು ಎಂದು ಫೆಡರೇಷನ್‌ ಸೋಮವಾರ ಬೆಳಿಗ್ಗೆ ತಿಳಿಸಿದೆ. ಆದರೆ ನಿಧನದ ಕಾರಣವನ್ನು ಬಹಿರಂಗಮಾಡಿಲ್ಲ. ಪ್ರಶಸ್ತಿ ಸಂಭ್ರಮ ನಡೆದ ನಂತರ ಕುಟುಂಬದವರು ಕಾರ್ಮೊನಾಗೆ ವಿಷಯ ತಿಳಿಸಿದರು.

‘ನಾನು ವಿಶೇಷವಾದುದನ್ನು ಸಾಧಿಸಲು ಶಕ್ತಿ ನೀಡಿದ್ದು ನೀನೆಂದು ನನಗೆ ಗೊತ್ತು. ನನ್ನನ್ನು ನೀಡು ನೋಡುತ್ತಿರುತ್ತಿ. ನನ್ನ ಬಗ್ಗೆ ಹೆಮ್ಮೆಪಟ್ಟಿರುತ್ತಿ. ರೆಸ್ಟ್‌ ಇನ್‌ ಪೀಸ್‌ ಡ್ಯಾಡ್‌’ ಎಂದು ‘ಎಕ್ಸ್‌’ನಲ್ಲಿ (ಈ ಹಿಂದೆ ಟ್ವಿಟರ್‌) ಬರೆದಿದ್ದಾರೆ. ‘ನಿನ್ನೆ ನನ್ನ ಪಾಲಿಗೆ ಅತ್ಯುತ್ತಮ ಮತ್ತು ಅತಿ ಕೆಟ್ಟ ದಿನ’ ಎಂದು ಮತ್ತೊಂದು ಸಂದೇಶದಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT