ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೋಪಿಂಗ್: ಪಾಲ್ ಪೊಗ್ಬಾಗೆ ನಾಲ್ಕು ವರ್ಷ ನಿಷೇಧ

Published 1 ಮಾರ್ಚ್ 2024, 4:45 IST
Last Updated 1 ಮಾರ್ಚ್ 2024, 4:45 IST
ಅಕ್ಷರ ಗಾತ್ರ

ರೋಮ್: ಫ್ರಾನ್ಸ್‌ ದೇಶದ ಫುಟ್‌ಬಾಲ್ ತಾರೆ ಪಾಲ್ ಪೊಗ್ಬಾ ಅವರಿಗೆ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ನಾಲ್ಕು ವರ್ಷ ನಿಷೇಧ ಹಾಕಲಾಗಿದೆ.

ಇಟಲಿಯ ಆ್ಯಂಟಿ ಡೋಪಿಂಗ್ ಟ್ರಿಬ್ಯುನಲ್ ಗುರುವಾರ ಈ ಶಿಕ್ಷೆ ಪ್ರಕಟಿಸಿತು. 

ಹೋದ ವರ್ಷದ ಆಗಸ್ಟ್‌ನಲ್ಲಿ ಯುವೆಂಟಸ್ ಕ್ಲಬ್‌ನಲ್ಲಿ ಆಡಿದ್ದ ಪಾಲ್ ಅವರನ್ನು ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರು ನಿಷೇಧಿತ ಟೆಸ್ಟೊಸ್ಟಿರಾನ್ ಸೇವನೆ ಮಾಡಿದ್ದು ಸಾಬೀತಾಗಿತ್ತು. ಸೆಪ್ಟೆಂಬರ್‌ನಲ್ಲಿ ಅವರನ್ನು ತಾತ್ಕಾಲಿಕ ಅಮಾನತು  ಮಾಡಲಾಗಿತ್ತು. 

‘ಟ್ರಿಬ್ಯುನಲ್‌ನಲ್ಲಿಂದ  ಅಧಿಸೂಚನೆಯನ್ನು ಇಂದು ಬೆಳಿಗ್ಗೆ ಸ್ವೀಕರಿಸಿದ್ದೇವೆ‘ ಎಂದು ಪಾಲ್ ಅವರ ವಕ್ತಾರ ತಿಳಿಸಿದ್ದಾರೆ.  

ಈ ಕುರಿತು ಪ್ರತಿಕ್ರಿಯಿಸಿರುವ ಪಾಲ್, ‍‍‘ನನಗೆ ಆಘಾತ ಮತ್ತು ದುಃಖವಾಗಿದೆ. ನಾನು ಕಷ್ಟಪಟ್ಟು ನಿರ್ಮಿಸಿಕೊಂಡ ವೃತ್ತಿಜೀವನವನ್ನು ನನ್ನಿಂದ ಕಿತ್ತುಕೊಳ್ಳಲಾಗಿದೆ. ತೀರ್ಪು ಸರಿಯಿಲ್ಲ. ನಾನು ಮೇಲ್ಮನವಿ ಸಲ್ಲಿಸುತ್ತೇನೆ’ ಎಂದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT