ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಟುಂಬಿಕ ದೌರ್ಜನ್ಯ ಎಸಗಿದ ಫುಟ್‌ಬಾಲ್‌ ಆಟಗಾರ ಆ್ಯಂಡ್ರೆಜ್ ಜರ್ಮಾಕ್‌ ಸೆರೆಮನೆಗೆ

Last Updated 12 ಜೂನ್ 2020, 5:46 IST
ಅಕ್ಷರ ಗಾತ್ರ

ಅಂಗೊಲಿಮ್(ಫ್ರಾನ್ಸ್‌): ವಿಶ್ವಕಪ್‌ನಲ್ಲಿ ಮಿಂಚಿದ್ದ ಪೋಲೆಂಡ್ ಫುಟ್‌ಬಾಲ್‌ನ ಹಿರಿಯ ಆಟಗಾರ ಆ್ಯಂಡ್ರೆಜ್ ಜರ್ಮಾಕ್‌ ಅವರನ್ನು ಕೌಟುಂಬಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಸೆರೆಮನೆಗೆ ತಳ್ಳಲಾಗಿದೆ. 69 ವರ್ಷದ ಆ್ಯಂಡ್ರೆಜ್‌ಗೆ ಫ್ರಾನ್ಸ್‌ನ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು ಕುಡಿತದದಾಸ್ಯದಿಂದ ಮುಕ್ತಗೊಳಿಸಲು ಮಾನಸಿಕ ಚಿಕಿತ್ಸೆಗೆ ಒಳಪಡುವಂತೆಯೂ ಸಲಹೆ ನೀಡಿದೆ.

1974ರ ವಿಶ್ವಕಪ್‌ನಲ್ಲಿ ಅವರು ಐದು ಗೋಲುಗಳನ್ನು ಗಳಿಸಿದ್ದರು. ಆ ವಿಶ್ವಕಪ್‌ನಲ್ಲಿ ಪೋಲೆಂಡ್ ಮೂರನೇ ಸ್ಥಾನ ಗಳಿಸಿತ್ತು. ವೃತ್ತಿಜೀವನದ ಹೆಚ್ಚಿನ ಕಾಲವನ್ನು ಫ್ರಾನ್ಸ್‌ನಲ್ಲೇ ಕಳೆದಿರುವ ಅವರು ಪತ್ನಿ, 46 ವರ್ಷದ ಮಲ್ಗೊರ್ಜಟಾ ಮೇಲೆ ಮಾರ್ಚ್ ಆರರಂದು ಹಲ್ಲೆ ಮಾಡಿದ್ದರು.

ಕುಡಿತ ಬಿಟ್ಟಿದ್ದನ್ನು ತಿಳಿದ ನಂತರ ಪತ್ನಿಯುಪತಿಯನ್ನು ವಾಪಸ್ ಮನೆಗೆ ಕರೆದಿದ್ದರು. ಮಾಡಿದ ತಪ್ಪನ್ನು ಕ್ಷಮಿಸುವುದಾಗಿಯೂ ಈಗ ಆತಂಕವಿಲ್ಲ ಎಂದೂ ಹೇಳಿದ್ದರು. ಆದರೆ ಇನ್ನು ಮುಂದೆಯೂ ಹಲ್ಲೆ ನಡೆಸುವ ಸಾಧ್ಯತೆ ಇರುವುದರಿಂದ ಮನೆಗೆ ಹೋಗಲು ಉಪನ್ಯಾಯಾಧೀಶರು ಅವಕಾಶ ನೀಡಿರಲಿಲ್ಲ. ಇದನ್ನು ಲೆಕ್ಕಿಸದೆ ಮನೆಗೆ ತೆರಳಿದ್ದರು.

61 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 32 ಬಾರಿ ಚೆಂಡನ್ನು ಗುರಿ ಮುಟ್ಟಿಸಿರುವ ಆ್ಯಂಡ್ರೆಜ್, ಪೋಲೆಂಡ್ ಪರ ಅತ್ಯಧಿಕ ಗೋಲು ಗಳಿಸಿದವರ ಪಟ್ಟಿಯ ಆರನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT