ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FIFA Football Worl Cup: ರಾಮೋಸ್‌ ಹ್ಯಾಟ್ರಿಕ್‌: ಪೋರ್ಚುಗಲ್‌ ಜಯಭೇರಿ

ಕ್ವಾರ್ಟರ್‌ಫೈನಲ್‌ಗೆ ಪೋರ್ಚುಗಲ್‌: ಸ್ವಿಟ್ಜರ್ಲೆಂಡ್‌ ತಂಡದ ಕನಸು ಭಗ್ನ
Last Updated 7 ಡಿಸೆಂಬರ್ 2022, 20:58 IST
ಅಕ್ಷರ ಗಾತ್ರ

ದೋಹಾ (ಎಎಫ್‌ಪಿ): ತಾರಾ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಹೊರಗಿಟ್ಟು ಆಡಲಿಳಿದ ಪೋರ್ಚುಗಲ್ ತಂಡದ ನಿರ್ಧಾರವನ್ನು ಯುವ ಆಟಗಾರ ಗೊನ್ಸಾಲೊ ರಾಮೋಸ್ ಸಮರ್ಥಿಸಿಕೊಂಡರು. ಅವರು ಸಾಧಿಸಿದ ಸೊಗಸಾದ ಹ್ಯಾಟ್ರಿಕ್ ಬಲದಿಂದ ತಂಡವು ಸ್ವಿಟ್ಜರ್ಲೆಂಡ್‌ಗೆಸೋಲುಣಿಸಿ ವಿಶ್ವಕಪ್ ಟೂರ್ನಿಯ ಎಂಟರಘಟ್ಟ ಪ್ರವೇಶಿಸಿತು.

ಲುಸೈಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಪೋರ್ಚುಗಲ್‌ 6–1ರಿಂದ ಸ್ವಿಸ್‌ ತಂಡದ ವಿರುದ್ಧ ಗೆದ್ದಿತು.

ಈ ವಿಶ್ವಕಪ್‌ನಲ್ಲಿ ಮೊದಲ ಹ್ಯಾಟ್ರಿಕ್ ಇದು.

21 ವರ್ಷದ ರಾಮೋಸ್‌ ಅವರು ರೊನಾಲ್ಡೊ ಬದಲಿಗೆ ಕಣಕ್ಕಿಳಿದಿದ್ದರು. ದಿಗ್ಗಜ ಪೆಲೆ ಅವರ ಬಳಿಕ ವಿಶ್ವಕಪ್‌ ಟೂರ್ನಿಯ ನಾಕೌಟ್‌ ಹಂತದಲ್ಲಿ ಹ್ಯಾಟ್ರಿಕ್ ಸಾಧಿಸಿದ ಅತಿ ಕಿರಿಯ ಆಟಗಾರ ಎಂಬ ಹಿರಿಮೆ ಗಳಿಸಿದರು.1958ರಲ್ಲಿ ಪೆಲೆ ಫ್ರಾನ್ಸ್ ಎದುರಿನ ಸೆಮಿ ಪಂದ್ಯದಲ್ಲಿ ಬ್ರೆಜಿಲ್ ಪರ ಹ್ಯಾಟ್ರಿಕ್ಗೋಲು ದಾಖಲಿಸಿದ್ದರು. ಆಗ ಅವರಿಗೆ 17 ವರ್ಷ ವಯಸ್ಸಾಗಿತ್ತು.

ಜೊವಾ ಫೆಲಿಕ್ಸ್‌ ನೀಡಿದ ಪಾಸ್‌ನಲ್ಲಿ ರಾಮೋಸ್‌ ಅತ್ಯಂತ ವೇಗವಾಗಿ ಚೆಂಡನ್ನು ಗೋಲುಪೋಸ್ಟ್‌ಗೆ ಸೇರಿಸಿ ತಮ್ಮ ಮೊದಲ ಗೋಲು ದಾಖಲಿಸಿದರು.

ಇದಾದ ಬಳಿಕ 39 ವರ್ಷದ ಪೆಪೆ ಸೊಗಸಾದ ಹೆಡರ್ ಮೂಲಕ ಸ್ವಿಸ್‌ ಕೋಟೆಯನ್ನು ಭೇದಿಸಿದರು. ಮೊದಲಾರ್ಧ ಕೊನೆಗೊಂಡ ಆರು ನಿಮಿಷಗಳ ಬಳಿಕ ಗೋಲ್‌ಪೋಸ್ಟ್‌ನ ಹತ್ತಿರದಿಂದ ಡಿವೊಗೊ ಡ್ಯಾಲೊಟ್‌ ಕ್ರಾಸ್‌ ನೆರವಿನಿಂದ ರಾಮೋಸ್‌ ತಮ್ಮ ಎರಡನೇ ಗೋಲು ಗಳಿಸಿದರು. ಇದಾದ ನಾಲ್ಕು ನಿಮಿಷಗಳ ಬಳಿಕ ಗೆರೆರೊ ಅವರು ಗೋಲು ಹೊಡೆದರು.

ಈ ಹಂತದಲ್ಲಿ ಸತತ ಪ್ರಯತ್ನ ನಡೆಸಿದ್ದ ಸ್ವಿಸ್‌ ತಂಡಕ್ಕೆ ಫಲ ಲಭಿಸಿತು. ಕಾರ್ನರ್‌ ಕಿಕ್‌ನಲ್ಲಿ ಅಕಾಂಜಿ ಚೆಂಡನ್ನು ಸುಲಭವಾಗಿ ಗೋಲ್‌ಪೋಸ್ಟ್‌ಗೆ ಸೇರಿಸಿದರು.

67ನೇ ನಿಮಿಷದಲ್ಲಿ ರಾಮೊಸ್‌ ತಮ್ಮ ಮೂರನೇ ಗೋಲು ದಾಖಲಿಸಿದರು. 74ನೇ ನಿಮಿಷದಲ್ಲಿ ಸಬ್‌ಸ್ಟಿಟ್ಯೂಟ್‌ ಆಟಗಾರನಾಗಿ ರೊನಾಲ್ಡೊ ಕಣಕ್ಕಿಳಿದರು. ಒಂದು ಬಾರಿ ಅವರು ಚೆಂಡನ್ನು ಗೋಲ್‌ಪೋಸ್ಟ್‌ಗೆ ಸೇರಿಸಿದರೂ ಅದು ಆಫ್‌ಸೈಡ್ ಆಗಿತ್ತು.

ಇಂಜುರಿ ಅವಧಿಯಲ್ಲಿ ಲೆಯಾವೊ ಅವರು ಪೋರ್ಚುಗಲ್ ತಂಡದ ಆರನೇ ಗೋಲು ದಾಖಲಿಸಿದರು.

ಪೋರ್ಚುಗಲ್ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ಮೊರೊಕ್ಕೊ ಸವಾಲು ಎದುರಿಸಲಿದೆ.

ಈ ಸೋಲಿನೊಂದಿಗೆ 1954ರ ಬಳಿಕ ಮೊದಲ ಬಾರಿ ಕ್ವಾರ್ಟರ್‌ ತಲುಪುವ ಸ್ವಿಸ್ ತಂಡದ ಆಸೆ ಈಡೇರಲಿಲ್ಲ. ಸತತ ಮೂರನೇ ವಿಶ್ವಕಪ್‌ನಲ್ಲಿ 16ರ ಘಟ್ಟದಲ್ಲಿ ಎಡವಿತು.

ಗೋಲು ವಿವರ

ಪೋರ್ಚುಗಲ್‌ 6

lಗೊನ್ಸಾಲೊ ರಾಮೋಸ್‌(17, 51, 67ನೇ ನಿ.)

lಪೆಪೆ (33ನೇ ನಿ.)

lರಫಾಯಿಲ್‌ ಗೆರೆರೊ (55ನೇ ನಿ.)

lರಫೆಲ್‌ ಲೆಯಾವೊ (90+2ನೇ ನಿ.)

ಸ್ವಿಟ್ಜರ್ಲೆಂಡ್‌ 1

lಮ್ಯಾನ್ಯುಯೆಲ್ ಅಕಾಂಜಿ(58ನೇ ನಿ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT