ಶುಕ್ರವಾರ, ಆಗಸ್ಟ್ 14, 2020
27 °C

ರಾಮೋಸ್‌ ಗೋಲಿನಿಂದ ಗೆಟಫೆ ವಿರುದ್ಧ ಮ್ಯಾಡ್ರಿಡ್‌ಗೆ ಜಯ

ಎಪಿ Updated:

ಅಕ್ಷರ ಗಾತ್ರ : | |

prajavani

ಬಾರ್ಸಿಲೋನಾ‌: ಸ್ಪೇನ್‌ನ ಸೆರ್ಜಿಯೊ ರಾಮೋಸ್‌ ಅವರು ಪಂದ್ಯದ ಕೊನೆಯ ಹಂತದಲ್ಲಿ ಗಳಿಸಿದ ಗೋಲಿನ ಬಲದಿಂದ ರಿಯಲ್‌ ಮ್ಯಾಡ್ರಿಡ್‌ ತಂಡ 1–0ಯಿಂದ ಗೆಟಫೆ ವಿರುದ್ಧ ಜಯಿಸಿತು. ಇದರೊಂದಿಗೆ ಸ್ಪ್ಯಾನಿಷ್‌ ಲೀಗ್‌ ಫುಟ್‌ಬಾಲ್ ಟೂರ್ನಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಪಂದ್ಯದ 79ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಸ್ಪಾಟ್‌ ಕಿಕ್‌ ಮೂಲಕ ಗೋಲಾಗಿ ಪರಿವರ್ತಿಸಿದ ರಾಮೋಸ್, ತಂಡದ ಸಂಭ್ರಮಕ್ಕೆ ಕಾರಣವಾದರು. ಗೆಟಫೆ ತಂಡದ ಕಳಪೆ ಡಿಫೆನ್ಸ್‌ ಕೂಡ ಇದಕ್ಕೆ ಕಾರಣವಾಯಿತು.

ರಿಯಲ್‌ ಮ್ಯಾಡ್ರಿಡ್‌ನ ಈ ಗೆಲುವಿನೊಂದಿಗೆ ಬಾರ್ಸಿಲೋನಾ ತಂಡದ ಪದಕ ಗೆಲ್ಲುವ ಆಸೆ ಮತ್ತಷ್ಟು ಕ್ಷೀಣಿಸಿದೆ. ಕೋವಿಡ್‌ ಪಿಡುಗಿನ ಹಾವಳಿಯ ಬಳಿಕ ಆರಂಭವಾಗ ಲೀಗ್‌ನಲ್ಲಿ ತಂಡವು ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಡ್ರಾ ಸಾಧಿಸಿದೆ. ಮಂಗಳವಾರ ನಡೆದ ಅಟ್ಲೆಟಿಕೊ ಎದುರು ನಡೆದ ಪಂದ್ಯದಲ್ಲೂ 2–2 ಡ್ರಾಕ್ಕೆ ಸಮಾಧಾನಪಟ್ಟಿತ್ತು.

ಈ ಋತುವಿನ ಲೀಗ್‌ನಲ್ಲಿ ರಾಮೋಸ್‌ ಗಳಿಸಿದ ಒಂಬತ್ತನೇ ಗೋಲು ಇದು. ಲೀಗ್‌ನ ಎಲ್ಲ ಆರೂ ಪಂದ್ಯಗಳಲ್ಲಿ ಮ್ಯಾಡ್ರಿಡ್‌ ಗೆಲುವು ಸಾಧಿಸಿದೆ. ಕೋವಿಡ್‌ ಪಿಡುಗಿನ ಹಿನ್ನೆಲೆಯಲ್ಲಿ ಮೂರು ತಿಂಗಳ ಕಾಲ ಲೀಗ್‌ ಸ್ಥಗಿತಗೊಂಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು