ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ, ಫುಟ್‌ಬಾಲ್ ದಿಗ್ಗಜ ಸುಭಾಸ್ ಭೌಮಿಕ್ ಇನ್ನಿಲ್ಲ

Last Updated 22 ಜನವರಿ 2022, 15:34 IST
ಅಕ್ಷರ ಗಾತ್ರ

ಕೋಲ್ಕತ್ತ: ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಭಾರತ ಫುಟ್‌ಬಾಲ್ ತಂಡದ ಆಟಗಾರ ಸುಭಾಸ್ ಭೌಮಿಕ್ (72) ಶನಿವಾರ ಬೆಳಿಗ್ಗೆ ನಿಧನರಾದರು.

ಅವರು ಕೆಲವು ತಿಂಗಳುಗಳಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ.

‘ಕಳೆದ ಮೂರುವರೆ ತಿಂಗಳುಗಳಿಂದ ಅವರಿಗೆ ಡಯಾಲಿಸಿಸ್‌ ಚಿಕಿತ್ಸೆ ನೀಡಲಾಗುತ್ತಿತ್ತು. 23 ವರ್ಷಗಳ ಹಿಂದೆ ಅವರು ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಈಚೆಗೆ ಎದೆಯ ಸೋಂಕಿನಿಂದ ಬಳಲಿದ್ದ ಅವರನ್ನುಇಕ್ಬಾಲ್‌ಪುರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು’ ಎಂದು ಅವರ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.

1970ರ ಏಷ್ಯನ್ ಗೇಮ್ಸ್‌ನಲ್ಲಿ ಆಡಿದ್ದ ಭಾರತ ತಂಡದಲ್ಲಿ ಅವರಿದ್ದರು. ‘ಬುಲ್ಡೋಜರ್‌’ ಎಂದೇ ಖ್ಯಾತರಾಗಿದ್ದ ಸುಭಾಷ್ ಮತ್ತು ಅವರೊಂದಿಗೆ ಸುಧೀರ್ ಕರ್ಮಾಕರ್ ಅವರು ರೈಟ್‌ ಬ್ಯಾಕ್‌ನಲ್ಲಿ ಅಮೋಘವಾಗಿ ಆಡಿದ್ದರು.

60 ಮತ್ತು 70ರ ದಶಕದಲ್ಲಿ ಖ್ಯಾತನಾಮ ಅಂತರರಾಷ್ಟ್ರೀಯ ಫುಟ್‌ಬಾಲ್ ಆಟಗಾರರಾಗಿದ್ದ ಪ್ರದೀಪ್ ಬ್ಯಾನರ್ಜಿ, ಚುನಿ ಗೋಸ್ವಾಮಿ, ತುಳಸಿದಾಸ್ ಬಲರಾಮ್, ಜರ್ನೈಲ್ ಸಿಂಗ್, ಅರುಣ್ ಘೋಷ್, ಪೀಟರ್ ತಂಗರಾಜ್ ಅವರೊಂದಿಗೆ ಭೌಮಿಕ್ ಅವರದ್ದು ಗಣನೀಯ ಸಾಧನೆಯಾಗಿದೆ.

ಭಾರತ ತಂಡದಲ್ಲಿ ಅವರು 24 ಪಂದ್ಯಗಳನ್ನು ಆಡಿದ್ದಾರೆ. 9 ಗೋಲುಗಳನ್ನು ಹೊಡೆದಿದ್ದಾರೆ. ಮೆರ್ಡೆಕಾ ಕಪ್ ಟೂರ್ನಿಯಲ್ಲಿ ಅವರು ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT