ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಫ್‌ ಫುಟ್‌ಬಾಲ್‌: ಸೆಮಿಗೆ ಭಾರತ ಮಹಿಳಾ ತಂಡ

ಸ್ಯಾಫ್‌ ಕಪ್‌ ಮಹಿಳಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಶ್ರೀಲಂಕಾ ವಿರುದ್ಧ ಭರ್ಜರಿ ಜಯ
Last Updated 17 ಮಾರ್ಚ್ 2019, 18:30 IST
ಅಕ್ಷರ ಗಾತ್ರ

ಬಿರಾತ್ ನಗರ, ನೇಪಾಳ: ಶ್ರೀಲಂಕಾವನ್ನು 5–0 ಗೋಲುಗಳಿಂದ ಮಣಿಸಿದ ಭಾರತ ತಂಡ ಮಹಿಳೆಯರ ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ಗೆ ಲಗ್ಗೆ ಇರಿಸಿತು.

ಸಾಹಿದ್ ರಂಗಶಾಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಭಾರತ 5–0 ಗೋಲುಗಳಿಂದ ಗೆದ್ದಿತು.

ನಾಯಕಿ ಸಂಜು ಮಿಂಚಿನಾಟ: ಭಾರತ ಭಾನುವಾರ ನಾಲ್ಕನೇ ನಿಮಿಷದಲ್ಲೇ ಮೊದಲ ಗೋಲು ಗಳಿಸಿತು. ಗ್ರೇಸ್‌ ಡಂಗ್‌ಮೀ ಅವರು ಚೆಂಡನ್ನು ಗುರಿ ಮುಟ್ಟಿಸಿದರು. ಸಂಜು ಅವರು ನೀಡಿದ ಮೋಹಕ ಕ್ರಾಸ್‌ ಅನ್ನು ಗ್ರೇಸ್‌ ಸದುಪಯೋಗ ಮಾಡಿಕೊಂಡರು.

ಮೂರು ನಿಮಿಷಗಳ ನಂತರ ಸಂಜು ಮತ್ತೊಮ್ಮೆ ಮ್ಯಾಜಿಕ್ ಮಾಡಿದರು. ಎಡ ಭಾಗದಲ್ಲಿ ನಿಖರವಾಗಿ ಸಂಧ್ಯಾ ಅವರಿಗೆ ಕ್ರಾಸ್ ಮಾಡಿದರು. ಸಂಧ್ಯಾ, ಮಿಂಚಿನ ವೇಗದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ಭಾರತ ತಂಡ ವಿರಾಮಕ್ಕೆ ತೆರಳುವ ಮುನ್ನ ಮತ್ತೆ ಎರಡು ಗೋಲುಗಳನ್ನು ಹೊಡೆದು ಸಂಭ್ರಮಿಸಿತು. 36ನೇ ನಿಮಿಷದಲ್ಲಿ ಸಂಜು ನೀಡಿದ ಚೆಂಡನ್ನು ನಿಯಂತ್ರಿಸಿದ ಇಂದುಮತಿ ಗೋಲು ಗಳಿಸಿದರು. 45ನೇ ನಿಮಿಷದಲ್ಲಿ ಸಂಜು ಕ್ರಾಸ್ ಮಾಡಿದ ಚೆಂಡು ಶ್ರೀಲಂಕಾದ ಡಿಫೆಂಡರ್ ಕೈಗೆ ತಾಗಿತು. ಗೋಲ್‌ಕೀಪರ್‌ ಪೆನಾಲ್ಟಿ ವಿಧಿಸಿದರು. ಸಂಗೀತಾ ಯಾವುದೇ ತಪ್ಪೆಸಗದೆ ಗೋಲು ದಾಖಲಿಸಿದರು.

ಮುಂದುವರಿದ ಆಕ್ರಮಣ: ದ್ವಿತೀಯಾರ್ಧದಲ್ಲೂ ಭಾರತದ ಮಹಿಳೆಯರ ಆಕ್ರಮಣಕಾರಿ ಆಟ ಮುಂದುವರಿಯಿತು. ರತನ್‌ಬಾಲಾ ಅವರು ಗಳಿಸಿದ ಗೋಲಿನೊಂದಿಗೆ ತಂಡದ ಮುನ್ನಡೆ 5–0ಗೆ ಏರಿತು.

ಜಪಮಣಿ ಟುಡು ಅವರು ಫ್ರೀ ಕಿಕ್‌ನಲ್ಲಿ ವೈಫಲ್ಯ ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT