ಶನಿವಾರ, ಸೆಪ್ಟೆಂಬರ್ 25, 2021
23 °C

ಫುಟ್‌ಬಾಲ್ ಟೂರ್ನಿ: ಶುಶ್ರೂತ್‌ ಹ್ಯಾಟ್ರಿಕ್‌ ಗೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶುಶ್ರೂತ್ ಕೆ. ರಾಜ್‌ಕುಮಾರ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ರೂಟ್ಸ್ ಅಕಾಡೆಮಿ ತಂಡವು ಕೆಎಸ್‌ಎಫ್ಎ–ಬಿಡಿಎಫ್‌ಎ ‘ಸಿ’ ಡಿವಿಷನ್ ನಾಕೌಟ್ ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿತು.

ಇಲ್ಲಿಯ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹಣಾಹಣಿಯಲ್ಲಿ ಆ ತಂಡಕ್ಕೆ 4–0ಯಿಂದ ವಿಲಿಯಮ್‌ ಎಫ್‌ಸಿ ಎದುರು ಜಯ ಒಲಿಯಿತು. ಶುಶ್ರೂತ್ ಅವರು 23, 29 ಮತ್ತು 48ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಇನ್ನೊಂದು ಗೋಲನ್ನು ಇರ್ವಿನ್ ನಿಲುಸ್‌ ಕಾರ್ಡೊಜಾ (40ನೇ ನಿಮಿಷ) ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ರಿಚಮಂಡ್ ಪ್ಯಾಂಥರ್ಸ್ ಎಫ್‌ಸಿ ತಂಡವು 2–1ರಿಂದ ತಮರಾಯಿಕಣ್ಣನ್ ಎಫ್‌ಸಿ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಸಿದ್ಧಾರ್ಥ ಭಾರ್ಗವ 17ನೇ ನಿಮಿಷ ಮತ್ತು ರೋಹನ್ ಜಾಕೋಬ್ 26ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು. ತಮರಾಯಿಕಣ್ಣನ್ ಪರ ಶ್ರೀಹರಿ (45ನೇ ನಿಮಿಷ) ಗೋಲು ಹೊಡೆದರು.

ಇನ್ನೊಂದು ಪಂದ್ಯದಲ್ಲಿ ಅಲ್ ಫತೇಹ್ ಎಫ್‌ಸಿ ತಂಡವು 1–0ಯಿಂದ ಶಮಂತ್ ಎಫ್‌ಸಿ ಎದುರು ಜಯ ಸಾಧಿಸಿತು. ಅಲ್ ಪತೇಹ್ ತಂಡದ ಶಾರಿಕ್‌ 10ನೇ ನಿಮಿಷದಲ್ಲಿ ಗೋಲು ಹೊಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು