ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಫುಟ್‌ಬಾಲ್ ಟೂರ್ನಿ: ನೈಜೀರಿಯಾ ಮೇಲೆ ಪೋರ್ಚುಗಲ್ ಸವಾರಿ

ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಬ್ರೂನೊ ಫರ್ನಾಂಡಿಸ್‌
Last Updated 18 ನವೆಂಬರ್ 2022, 13:33 IST
ಅಕ್ಷರ ಗಾತ್ರ

ಲಿಸ್ಬನ್‌, ಪೋರ್ಚುಗಲ್‌: ಬ್ರೂನೊ ಫರ್ನಾಂಡಿಸ್‌ ಗಳಿಸಿದ ಎರಡು ಗೋಲುಗಳು ಪೋರ್ಚುಗಲ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟವು.

ಗುರುವಾರ ಇಲ್ಲಿ ನಡೆದ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಪೋರ್ಚುಗಲ್‌ ತಂಡವು 4–0ಯಿಂದ ನೈಜೀರಿಯಾ ತಂಡಕ್ಕೆ ಸೋಲುಣಿಸಿತು.

ಪೋರ್ಚುಗಲ್ ತಂಡದ ತಾರಾ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಈ ಪಂದ್ಯದಲ್ಲಿ ಹೊಟ್ಟೆನೋವಿನ ಕಾರಣ ಆಡಲಿಲ್ಲ. ಆದರೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನ ಅವರ ಸಹ ಆಟಗಾರ ಫರ್ನಾಂಡಿಸ್‌ ಇಲ್ಲಿ ಮಿಂಚಿದರು.

ಅಲ್ವಾಲೇಡ್‌ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯ ಒಂಬತ್ತನೇ ನಿಮಿಷದಲ್ಲಿ ಫರ್ನಾಂಡಿಸ್‌ ಮೊದಲ ಗೋಲು ದಾಖಲಿಸಿದರು. 35ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶದಲ್ಲಿ ಕಾಲ್ಚಳಕ ತೋರಿದ ಫರ್ನಾಂಡಿಸ್‌ ಮುನ್ನಡೆಯನ್ನು ಹೆಚ್ಚಿಸಿದರು.

ಇದೇ ಮೊದಲ ಬಾರಿ ಅಂತರರಾಷ್ಟ್ರೀಯ ಪಂದ್ಯದ ಕಣಕ್ಕಿಳಿದಿದ್ದ ಗೊನ್ಸಾಲೊ ರಾಮೋಸ್‌, ದ್ವಿತೀಯಾರ್ಧದಲ್ಲಿ ಪೋರ್ಚುಗಲ್ ತಂಡಕ್ಕಾಗಿ ಕಾಲ್ಚಳಕ ತೋರಿದರು. ಮುನ್ನಡೆ 3–0ಗೆ ಹೆಚ್ಚಿತು. ಜೋವಾ ಮರಿಯಾ ತಂಡದ ನಾಲ್ಕನೇ ಗೋಲು ಗಳಿಸಿ ಜಯ ಪೋರ್ಚುಗಲ್ ಜಯ ಖಚಿತಪಡಿಸಿದರು. ತನ್ನ ಕೊನೆಯ ಅಭ್ಯಾಸ ಪಂದ್ಯವಾಡಿದ ತಂಡವು ಶುಕ್ರವಾರ ದೋಹಾಕ್ಕೆ ಬಂದಿಳಿಯಿತು.

ಸ್ಪೇನ್‌ ಜಯಭೇರಿ: ಮತ್ತೊಂದು ಅಭ್ಯಾಸ ಪಂದ್ಯದಲ್ಲಿ ಸ್ಪೇನ್‌ 3–1ರಿಂದ ಜೋರ್ಡನ್ ಎದುರು ಗೆದ್ದಿತು. ವಿಜೇತ ತಂಡಕ್ಕಾಗಿ ಅನ್ಸು ಫಾಟಿ ಮತ್ತು ಗ್ಯಾವಿ ಕ್ರಮವಾಗಿ 13 ಮತ್ತು 56ನೇ ನಿಮಿಷಗಳಲ್ಲಿ ಮೋಡಿ ಮಾಡಿದರು. ನಿಕೊ ವಿಲಿಯಮ್ಸ್ 84ನೇ ನಿಮಿಷದಲ್ಲಿ ತಂಡದ ಮತ್ತೊಂದು ಗೋಲು ದಾಖಲಿಸಿದರು.

ಇನ್ನುಳಿದ ಪಂದ್ಯಗಳಲ್ಲಿ ಮೊರಕ್ಕೊ 3–0ಯಿಂದ ಜಾರ್ಜಿಯಾ ಎದುರು, ಘಾನಾ 2–0ಯಿಂದ ಸ್ವಿಟ್ಜರ್ಲೆಂಡ್‌ ವಿರುದ್ಧ, ಕೆನಡಾ 2–1ರಿಂದ ಜಪಾನ್‌ ಎದುರು ಗೆಲುವಿನ ನಗೆ ಬೀರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT