ಸೋಮವಾರ, ಡಿಸೆಂಬರ್ 9, 2019
17 °C

ಜಪಾನ್‌ನಲ್ಲಿ ಗೆಲುವಿನ ಸಂಭ್ರಮ

Published:
Updated:

ಟೋಕಿಯೊ: ಒಸಾಕದಲ್ಲಿ ಈಚೆಗೆ ಐದು ಮಂದಿಯ ಪ್ರಾಣ ಬಲಿ ಪಡೆದು ನೂರಾರು ಮಂದಿಯನ್ನು ಗಾಯಗೊಳಿಸಿದ ಭೂಕಂಪಕ್ಕೆ ಜಪಾನ್‌ನಲ್ಲಿ ಜನರು ತತ್ತರಿಸಿದ್ದರು. ಆದರೆ ಮಂಗಳವಾರ ಸಂಜೆ ದೇಶದ ಪ್ರಮುಖ ನಗರಗಳ ಬೀದಿಯಲ್ಲಿ ಸಂಭ್ರಮ ಮನೆ ಮಾಡಿತು. ಬಾರ್‌ಗಳು, ಸಂಗೀತ–ನೃತ್ಯದ ಗುಂಗು, ಬಾರ್‌ಗಳು ಮತ್ತು ಪಬ್‌ಗಳನ್ನು ರಂಗೇರಿತು. ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಕೊಲಂಬಿಯಾವನ್ನು ಮಣಿಸಿದ ಜಪಾನ್‌ ತಂಡದ ಆಟಗಾರರನ್ನು ಕೊಂಡಾಡಿದ ಜನರು ಜಯದ ಸಂತಸದ ಅಲೆಯಲ್ಲಿ ಮಿಂದೆದ್ದರು.

ಈ ಪಂದ್ಯದಲ್ಲಿ 2–1ರಿಂದ ಗೆದ್ದ ಜಪಾನ್, ವಿಶ್ವಕಪ್‌ನಲ್ಲಿ ದಕ್ಷಿಣ ಅಮೆರಿಕದ ತಂಡವೊಂದರ ವಿರುದ್ಧ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.  ಪಂದ್ಯವನ್ನು ಬಾರ್‌ ಮತ್ತು ಪಬ್‌ಗಳಲ್ಲಿ ಟಿವಿಗಳಲ್ಲಿ ವೀಕ್ಷಿಸಿದವರು ಅಲ್ಲೇ ಕುಣಿದು ಕುಪ್ಪಳಿಸಿದರು. ಮನೆಗಳು ಮತ್ತು ಬೀದಿಗಳಲ್ಲೂ ಖುಷಿಯ ಅಲೆ ಎದ್ದಿತು. ರಸ್ತೆಗೆ ಇಳಿದು ಸಂಭ್ರಮ ಆಚರಿಸಿದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.

ಬುಧವಾರದ ಪತ್ರಿಕೆಗಳ ಮುಖಪುಟದಲ್ಲಿ ಜಪಾನ್ ತಂಡದ ಚಿತ್ರಗಳು ರಾರಾಜಿಸಿದವು. ಆಟಗಾರರನ್ನು ಸರ್ಕಾರವೂ ಅಭಿನಂದಿಸಿತು. ಅನುಭವಿ ಮತ್ತು ಯುವ ಆಟಗಾರರು ಜಪಾನ್‌ಗೆ ಗೌರವ ಗಳಿಸಿಕೊಟ್ಟಿದ್ದಾರೆ ಎಂದು ಅಲ್ಲಿಯ ಸರ್ಕಾರವು ಅಭಿನಂದಿಸಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು