ಮಂಗಳವಾರ, ಏಪ್ರಿಲ್ 13, 2021
32 °C

ಫುಟ್‌ಬಾಲ್ ಪಂದ್ಯಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಫುಟ್‌ಬಾಲ್‌ ಬಾಲ್ ಸಂಸ್ಥೆ ಆಶ್ರಯದಲ್ಲಿ ಮೂರು ದಿನಗಳ ಫುಟ್‌ಬಾಲ್ ಪಂದ್ಯಕ್ಕೆ ನಗರದ ಎಸ್.ಎಸ್. ಹೈಸ್ಕೂಲ್‌ ಮೈದಾನದಲ್ಲಿ ಶುಕ್ರವಾರ ವಿನೋದಕುಮಾರ ಮಣೂರ ಚಾಲನೆ ನೀಡಿದರು.

ಯಾರು ಕ್ರೀಡಾ ಚಟುವಟಿಕೆಗಳಲ್ಲಿ, ವ್ಯಾಯಾಮಗಳಲ್ಲಿ ನಿರತರಾಗಿರುತ್ತಾರೋ ಅಂತಹವರು ಉತ್ತಮ ಆರೋಗ್ಯ ಹೊಂದಿರುತ್ತಾರೆ ಎಂದರು.

ಪ್ರತಿಯೊಬ್ಬರೂ ತಮ್ಮ ಬಿಡುವಿನ ವೇಳೆಯಲ್ಲಿ ಯಾವುದಾದರು ಒಂದು ಆಟವನ್ನು ಆಡುವ ಹವ್ಯಾಸ ಬೆಳಸಿಕೊಳ್ಳುವುದು ಬಹಳ ಒಳ್ಳೆಯದು, ಆಟಗಳು ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುತ್ತವೆ ಎಂದು ಹೇಳಿದರು.

ಜ್ಞಾನವು ಮನಸ್ಸಿಗೆ ಆಹಾರವಾದರೆ, ಕ್ರೀಡೆಗಳು ಶರೀರಕ್ಕೆ ಆಹಾರ. ಆಟದಲ್ಲಿ ಭಾಗವಹಿಸಿದಾಗ ನೀತಿ ನಿಯಮಗಳನ್ನು ಪಾಲಿಸಬೇಕು, ಆಟಗಳನ್ನು ಆಡುವುದರಿಂದ ಒಬ್ಬರಿಗೊಬ್ಬರು ಹೇಗೆ ಸ್ನೇಹದಿಂದ ವರ್ತಿಸಬೇಕು, ಸಹಾಯ ಮಾಡಬೇಕು ಎಂಬುದು ಅರಿವಾಗುತ್ತದೆ ಎಂದರು.

ವಕೀಲ ಸಂಗಮೇಶ ಹೌದೆ ಮಾತನಾಡಿ, ಸೋತಾಗ ಅಂಜದೆ, ಮತ್ತೆ ಮತ್ತೆ ಪ್ರಯತ್ನಿಸಿ ಗೆಲ್ಲುವ ಮನೋಭಾವ ಬೆಳೆಯುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಸ್ಥಿತಿಯಲ್ಲಿ ತೆಗೆದುಕೊಳ್ಳುವ ಮನೋಭಾವ ಬೆಳೆಯುತ್ತದೆ. ಕ್ರೀಡಾ ಮನೋಭಾವನೆಯು ಬೆಳೆದು ಜೀವನದುದ್ದಕ್ಕೂ ಎಲ್ಲ ಕ್ಷೇತ್ರದಲ್ಲೂ ನೀತಿಯುತವಾಗಿ ನಿಯಮ ಉಲ್ಲಂಘಿಸದೆ ಬಾಳುವದನ್ನು ಕಲಿಸುತ್ತದೆ ಎಂದರು.

ವಿಜಯಪುರ ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ ಹಾಗೂ ಸಿದ್ಧಶ್ವರ ಬ್ಯಾಂಕಿನ ನಿರ್ದೇಶಕ ಗುರು ಗಚ್ಚಿನಮಠ, ಯಲ್ಲಪ್ಪ ಚಂಪಲೆ, ವಿನಾಯಕ ಸಿಂಘಿ, ಶ್ರೀಧರ ಜೋಷಿ, ಸಂತೋಷ ಕಬಾಡೆ, ಸೋಮೆಶ ಅಳಗುಂಡಗಿ, ರವಿ ಮಾನೆ, ಸುರೇಶ ಜಮಖಂಡಿ, ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು