ಕೋಯಿಕ್ಕೋಡ್: ಬೆಂಗಳೂರು ಎಫ್ಸಿ ತಂಡ ಶುಕ್ರವಾರ 2–0 ಗೋಲುಗಳಿಂದ ಜಮ್ಷೆಡ್ಪುರ ತಂಡವನ್ನು ಸೋಲಿಸಿ ಹೀರೊ ಸೂಪರ್ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿತು.

ಕಾರ್ಪೊರೇಷನ್ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದ ಎರಡೂ ಗೋಲುಗಳು ಉತ್ತರಾರ್ಧದಲ್ಲಿ ಬಂದವು. 67ನೇ ನಿಮಿಷ ಜಯೇಶ್ ರಾಣೆ ಬೆಂಗಳೂರಿನ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 87ನೇ ನಿಮಿಷ ನಾಯಕ ಸುನೀಲ್ ಚೆಟ್ರಿ ಅವರು ರಾಯ್ಕೃಷ್ಣ ಪಾಸ್ನಲ್ಲಿ ಗೋಲುಗಳನ್ನು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಈ ಬಾರಿ ಬೆಂಗಳೂರಿನ ತಂಡ ಮೂರನೇ ಬಾರಿ ಫೈನಲ್ ತಲುಪಿ ದಂತಾಗಿದೆ. ಋತುವಿನ ಆರಂಭದಲ್ಲಿ ಡ್ಯುರಾಂಡ್ ಕಪ್ ಗೆದ್ದುಕೊಂಡಿದ್ದ ಬಿಎಫ್ಸಿ ನಂತರ ಇಂಡಿಯನ್ ಸೂಪರ್ಲೀಗ್ ಫೈನಲ್ ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.