ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಬಿಯುಎಫ್‌ಸಿ ತಂಡಕ್ಕೆ ಗೆಲುವು

Published 24 ಆಗಸ್ಟ್ 2023, 21:00 IST
Last Updated 24 ಆಗಸ್ಟ್ 2023, 21:00 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಯುನೈಟೆಡ್‌ ಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ 3–1ರಿಂದ ಯಂಗ್‌ ಚಾಲೆಂಜರ್ಸ್‌ ತಂಡವನ್ನು ಮಣಿಸಿತು.

ಗುರುವಾರ ನಡೆದ ಪಂದ್ಯದಲ್ಲಿ ಬಿಯುಎಫ್‌ಸಿ ತಂಡವು 2 ಗೋಲುಗಳ ಅಂತರದ ಜಯ ಸಾಧಿಸಿತು. ಆ ತಂಡದ ಎಚ್‌. ಬಿಶಾಲ್ (38ನೇ), ಇ. ಲಾಲ್ರೆಮ್ ರುವಾಟಾ (44ನೇ) ಸನ್ನಿ ಕುಮಾರ್ (63ನೇ) ತಲಾ ಒಂದು ಗೋಲು ಗಳಿಸಿದರೆ, ಚಾಲೆಂಜರ್ಸ್‌ ತಂಡದ ಪರ ಏಕೈಕ ಗೋಲನ್ನು ಶಾಮಿಲ್ ಶಮ್ನಾಸ್ (90+3ನೇ) ದಾಖಲಿಸಿದರು.

ಮತ್ತೊಂದು ಪಂದ್ಯದಲ್ಲಿ ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡವು 1–1ರಿಂದ ಕೊಡಗು ಎಫ್‌ಸಿ ತಂಡದೊಂದಿಗೆ ಡ್ರಾ ಸಾಧಿಸಿತು.

ಸ್ಟೂಡೆಂಟ್ಸ್‌ ತಂಡದ ಆದಿತ್ಯಾ ಪ್ರತಾಪ್‌ ಸಿಂಗ್‌ (29ನೇ), ಕೊಡಗು ತಂಡದ ಜೆಮ್ಶೀಡ್‌ ಅಲಿ (85ನೇ) ತಲಾ ಒಂದೊಂದು ಗೋಲು ಗಳಿಸಿದರು.

ಇಂದಿನ ಪಂದ್ಯಗಳು

ರೂಟ್ಸ್‌ ಎಫ್‌ಸಿ– ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ (ಮಧ್ಯಾಹ್ನ 1.30)

ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ– ಎಎಸ್‌ಸಿ ಅಂಡ್‌ ಸೆಂಟರ್‌ ಎಫ್‌ಸಿ (ಮಧ್ಯಾಹ್ನ 3.30)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT