ಬುಧವಾರ, ಮೇ 18, 2022
23 °C

ಸುರೇಂದ್ರ ಹ್ಯಾಟ್ರಿಕ್‌; ಎಚ್‌ಎಎಲ್‌, ರೆಬೆಲ್ಸ್ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸುರೇಂದ್ರ ಪ್ರಸಾದ್ ಗಳಿಸಿದ ಹ್ಯಾಟ್ರಿಕ್ ಮತ್ತು ಮೋನಿಶ್ ಅವರ ಎರಡು ಗೋಲುಗಳ ನೆರವಿನಿಂದ ಎಚ್‌ಎಎಲ್‌ ತಂಡ ಬೆಂಗಳೂರು ಫುಟ್‌ಬಾಲ್ ಸಂಸ್ಥೆಯ ‘ಎ’ ಡಿವಿಷನ್ ಲೀಗ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.

ಬೆಂಗಳೂರು ಫುಟ್‌ಬಾಲ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎಚ್‌ಎಎಲ್‌ 8–0ಯಿಂದ ಆದಾಯ ತೆರಿಗೆ ಇಲಾಖೆ ತಂಡವನ್ನು ಮಣಿಸಿತು.

16ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ಮುನ್ನಡೆ ಗಳಿಸಿಕೊಟ್ಟ ಸುರೇಂದ್ರ ಪ್ರಸಾದ್ 45 ಮತ್ತು 78ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ನರೇಂದ್ರ ಪ್ರಸಾದ್ 38ನೇ ನಿಮಿಷದಲ್ಲಿ ಗೋಲು ಗಳಿಸಿದರು. ರಿಹಿತ್ ಅಟ್ಕನ್ 40ನೇ ನಿಮಿಷದಲ್ಲಿ, ಮೋನಿಶ್‌ 42 ಮತ್ತು 66ನೇ ನಿಮಿಷಗಳಲ್ಲಿ, ಆ್ಯಂಡ್ರ್ಯೂ ಗುರಂಗ್ 50ನೇ ನಿಮಿಷದಲ್ಲಿ ಯಶಸ್ಸು ಕಂಡರು.

ರೆಬೆಲ್ಸ್ ಎಫ್‌ಸಿ ತಂಡ ಬ್ಲಿಟ್ಜ್‌ ಎಫ್‌ಸಿಯನ್ನು 6–0ಯಿಂದ ಮಣಿಸಿತು. ಜೊನುಮಾವಿಯಾ (31ನೇ ನಿ), ಮುಹಮ್ಮದ್ ರಮೀಫ್‌ (39ನೇ ನಿ), ಡೊನ್‌ಬೊಕ್ಲಾಂಗ್ ಲಿಂಗ್ಡೊ (51ನೇ ನಿ), ಆಕಾಶ್‌ ದವೆ (65, 69ನೇ ನಿ) ಮತ್ತು ದಿನೇಶ್ ಸಿಂಗ್ (77ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

‘ಸಿ’ ಡಿವಿಷನ್ ಪಂದ್ಯದಲ್ಲಿ ‘ಎಂ’ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸಿರುವ ಟೊರ್ನಾಡೊಸ್ ಎಫ್‌ಸಿ 5–0ಯಿಂದ ‘ಪಿ’ ಗುಂಪಿನ ಅಗ್ರಸ್ಥಾನದಲ್ಲಿರುವ ಯುನಿವರ್ಸಲ್ ಎಫ್‌ಸಿಯನ್ನು ಮಣಿಸಿತು. ಭರತ್‌ (28ನೇ ನಿ), ಸಚಿನ್ ಜೋಸೆಫ್‌ (35ನೇ ನಿ), ಸಚಿನ್ ಆನಂದ್ (56, 67ನೇ ನಿ) ಮತ್ತು ಸೂರ್ಯ ನಾರಾಯಣ (69ನೇ ನಿ) ಗೋಲು ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು