ಶನಿವಾರ, ಮೇ 30, 2020
27 °C
ಭಾರತ 17 ವರ್ಷದೊಳಗಿನ ಮಹಿಳಾ ಫುಟ್‌ಬಾಲ್‌ ತಂಡದ ಕೋಚ್‌ ಡೆನ್ನರ್‌ಬಿ

ಆಟಗಾರ್ತಿಯರ ಫಿಟ್‌ನೆಸ್‌ ನಿರ್ವಹಣೆಯಿಂದ ಸಂತಸ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ 17 ವರ್ಷದೊಳಗಿನವರ ಮಹಿಳಾ ಫುಟ್‌ಬಾಲ್‌ ತಂಡದ ಆಟಗಾರ್ತಿಯರು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆಯಲ್ಲೇ ತರಬೇತಿ ನಡೆಸುತ್ತಿದ್ದಾರೆ. ತಾವು ಸೂಚಿಸಿದ ಅನುಸಾರ ಫಿಟ್‌ನೆಸ್‌ ನಿರ್ವಹಿಸುತ್ತಿರುವ ಆಟಗಾರ್ತಿಯರ ಕಾರ್ಯಕ್ಕೆ ತಂಡದ ಕೋಚ್‌ ಥಾಮಸ್‌ ಡೆನ್ನರ್‌ಬಿ ಸಂತಸ ವ್ಯಕ್ತಪಡಿಸಿದ್ದಾರೆ.

ಫಿಫಾ 17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್‌ ಭಾರತದಲ್ಲೇ ನವಂಬರ್‌ನಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾ ಸೋಂಕು ಹಾವಳಿಯ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. 

ತಮ್ಮ ತವರು ಸ್ವೀಡನ್‌ಗೆ ತೆರಳುವ ಮುನ್ನ ಕೋಚ್‌ ಡೆನ್ನರ್‌ಬಿ ಅವರು ಆಟಗಾರ್ತಿಯರಿಗೆ, ಮನೆಯಲ್ಲೇ ನಿರ್ವಹಿಸಬಹುದಾದ ಫಿಟ್‌ನೆಸ್‌ ತಂತ್ರಗಳನ್ನು ಹೇಳಿಕೊಟ್ಟಿದ್ದರು. ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಕೂಡ ಆಟಗಾರ್ತಿಯರಿಗೆ, ಕೋಚ್‌ ಹಾಗೂ ನೆರವು ಸಿಬ್ಬಂದಿಯೊಡನೆ ವಿಡಿಯೊ ಕಾನ್ಫರೆನ್ಸ್‌ಗೆ ಅವಕಾಶ ಮಾಡಿಕೊಟ್ಟಿದೆ.

‘ಆಟಗಾರ್ತಿಯರ ಫಿಟ್‌ನೆಸ್‌ ನಿರ್ವಹಣೆಯಿಂದ ಖುಷಿಯಾಗಿದೆ. ತರಬೇತಿಯನ್ನು ತಪ್ಪಿಸಿಕೊಳ್ಳುತ್ತಿದ್ದೇವೆ ಎಂದು ಚಿಂತಿಸಬೇಕಿಲ್ಲ’ ಎಂದು ಡೆನ್ನರ್‌ಬಿ ಹೇಳಿದ್ದಾರೆ.

17 ವರ್ಷದೊಳಗಿನವರ ಫಿಫಾ ಮಹಿಳಾ ವಿಶ್ವಕಪ್‌ ಆತಿಥ್ಯಕ್ಕೆ ಭುವನೇಶ್ವರ, ಕೋಲ್ಕತ್ತ, ಗುವಾಹಟಿ, ಅಹ್ಮದಾಬಾದ್‌ ಹಾಗೂ ನವೀ ಮುಂಬೈ ನಗರಗಳನ್ನು ಅಂತಿಮಗೊಳಿಸಲಾಗಿದೆ. ಫಿಫಾ ಹಾಗೂ ಎಐಎಫ್‌ಎಫ್‌ ಹಾಗೂ ಸ್ಥಳೀಯ ಸಂಘಟನಾ ಸಮಿತಿಗಳು ಟೂರ್ನಿಯ ದಿನಾಂಕ ಪ್ರಕಟಿಸಲಿವೆ.

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು