ಬುಧವಾರ, ಅಕ್ಟೋಬರ್ 23, 2019
21 °C
2020ರ ಫಿಫಾ 17 ವರ್ಷದೊಳಗಿನವರ ಟೂರ್ನಿ

ನವೆಂಬರ್‌ 2ರಿಂದ ವನಿತಾ ಫುಟ್‌ಬಾಲ್‌ ಕಲರವ

Published:
Updated:

ನವದೆಹಲಿ: ಭಾರತ ಆಯೋಜಿಸುತ್ತಿರುವ ಮಹಿಳೆಯರ ಫಿಫಾ (17 ವರ್ಷದೊಳಗಿನವರು) ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ 2020ರ ನವೆಂಬರ್‌ 2ರಿಂದ 21ರವರೆಗೆ ನಡೆಯಲಿದೆ. 

ದೇಶದಾದ್ಯಂತ ನಾಲ್ಕು ನಗರಗಳಲ್ಲಿ ಟೂರ್ನಿ ನಡೆಯಲಿದೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣವನ್ನು ಟೂರ್ನಿ ನಡೆಯುವ ಸ್ಥಳವಾಗಿ ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೆ ಅಂತರರಾಷ್ಟ್ರೀಯ ಫುಟ್‌ಬಾಲ್‌ ಒಕ್ಕೂಟ ಸಂಸ್ಥೆಯ (ಫಿಫಾ) ಅನುಮೋದನೆ ಬಾಕಿಯಿದೆ.

ಕೋಲ್ಕತ್ತ, ನವೀ ಮುಂಬೈ, ಗೋವಾ ಹಾಗೂ ಅಹಮದಾಬಾದ್‌ ನಗರಗಳೂ ಪಂದ್ಯಗಳ ಆತಿಥ್ಯ ವಹಿಸಲು ಸ್ಪರ್ಧೆಯಲ್ಲಿವೆ. ಈ ವರ್ಷದ ಮಾರ್ಚ್‌ನಲ್ಲಿ ಭಾರತವನ್ನು ಟೂರ್ನಿಯ ಆತಿಥೇಯ ದೇಶವಾಗಿ ಘೋಷಿಸಲಾಗಿತ್ತು. ಎರಡು ವರ್ಷಗಳಿಗೊಮ್ಮೆ ನಡೆಯುವ ಟೂರ್ನಿಯಲ್ಲಿ 2018ರಲ್ಲಿ ಸ್ಪೇನ್‌ ಚಾಂಪಿಯನ್‌ ಆಗಿತ್ತು.

ಆತಿಥೇಯ ರಾಷ್ಟ್ರವಾಗಿ ಭಾರತ ಸ್ವಯಂ ಅರ್ಹತೆ ಪಡೆದಿದೆ. ಹೀಗಾಗಿ ಇದೇ 15ರಿಂದ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಏಷ್ಯನ್‌ ಅರ್ಹತಾ ಎಎಫ್‌ಸಿ 16 ವರ್ಷದೊಳಗಿನವರ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಅದು ಪಾಲ್ಗೊಳ್ಳುತ್ತಿಲ್ಲ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)