ಗುರುವಾರ , ಅಕ್ಟೋಬರ್ 22, 2020
21 °C

ಮುಂಬೈ ಸಿಟಿಗೆ ವಿಕ್ರಂ ಪ್ರತಾಪ್ ಸಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತ 20 ವರ್ಷದೊಳಗಿನವರ ಫುಟ್‌ಬಾಲ್ ತಂಡದ ಆಟಗಾರ ವಿಕ್ರಂ ಪ್ರತಾಪ್ ಸಿಂಗ್ ಅವರು ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಆಡುವ ಮುಂಬೈ ಸಿಟಿ ಫುಟ್‌ಬಾಲ್ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ.

18 ವರ್ಷದ ವಿಕ್ರಂ ಕ್ಲಬ್‌ ಜೊತೆಗೆ 2023ರವರೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. 

ವಿಕ್ರಂ  ಚಂಡೀಗಡ ಫುಟ್‌ಬಾಲ್ ಅಕಾಡೆಮಿಯಲ್ಲಿ ಯೂಥ್ ವಿಭಾಗದಲ್ಲಿ ಆಡುತ್ತಿದ್ದರು. 2018ರಲ್ಲಿ ಅವರು ಸೀನಿಯರ್ ತಂಡಕ್ಕೆ ಆಡಿದರು.

ಸ್ಟ್ರೈಕರ್ ಆಗಿರುವ ವಿಕ್ರಂ, ದೇಶದಲ್ಲಿರುವ ಭರವಸೆಯ ಯುವ ಆಟಗಾರರಲ್ಲಿ ಪ್ರಮುಖರಾಗಿದ್ದಾರೆ.

17 ವರ್ಷದೊಳದಗಿನ ಮತ್ತು 20 ವರ್ಷದೊಳಗಿವರ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ಧಾರೆ. ಎಎಫ್‌ಸಿ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ ನಲ್ಲಿ ಆಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು