ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಮೇಲೆ ರೂನಿ ಗರಂ

Last Updated 15 ಮಾರ್ಚ್ 2020, 21:02 IST
ಅಕ್ಷರ ಗಾತ್ರ

ಲಂಡನ್: ‘ಕೊರೊನಾ ವೈರಸ್ ಭೀತಿ ಹರಡುತ್ತಿದ್ದರೂ ಬ್ರಿಟನ್ ಸರ್ಕಾರ ಮತ್ತು ಅಲ್ಲಿನ ಫುಟ್‌ಬಾಲ್ ಸಂಸ್ಥೆಯ ಅಧಿಕಾರಿಗಳು ಆಟಗಾರರ ಬಗ್ಗೆ ಕಾಳಜಿ ವಹಿಸಲಿಲ್ಲ’ ಎಂದು ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮಾಜಿ ಆಟಗಾರ ವೇನ್ ರೂನಿ ದೂರಿದ್ದಾರೆ.

ಸೋಂಕು ಹರಡದಂತಿರಲು ಯುರೋಪ್‌ನ ಎಲ್ಲ ಕ್ರೀಡಾಕೂಟಗಳನ್ನು ತಕ್ಷಣ ಮುಂದೂಡಿದರೆ, ಪ್ರೀಮಿಯರ್ ಲೀಗ್ ಮತ್ತು ಇತರ ಫುಟ್‌ಬಾಲ್ ಲೀಗ್‌ಗಳನ್ನು ಮುಂದೂಡಲು ಮೀನ–ಮೇಷ ಎಣಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.

ಆರ್ಸೆನಲ್ ತಂಡದ ವ್ಯವಸ್ಥಾಪಕ ಮೈಕೆಲ್ ಆರ್ಟೆಟಾ ಮತ್ತು ಚೆಲ್ಸಿ ಆಟಗಾರ ಕಲುಮ್ ಹಡ್ಸನ್ ಒಡೊಯಿ ಅವರಿಗೆ ಸೋಂಕು ಇದೆ ಎಂದು ಶುಕ್ರವಾರ ಖಚಿತವಾಗಿತ್ತು. ಇದರ ನಂತರವಷ್ಟೇ ಏಪ್ರಿಲ್ 3ರ ವರೆಗೆ ಟೂರ್ನಿಗಳನ್ನು ಮುಂದೂಡಲು ಬ್ರಿಟನ್ ಫುಟ್‌ಬಾಲ್‌ ಆಡಳಿತ ನಿರ್ಧರಿಸಿತ್ತು.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಗಿರುವ ರೂನಿ ಈಗ ಡರ್ಬಿ ಪಂದ್ಯಗಳಲ್ಲಿ ಆಡುತ್ತಿದ್ದಾರೆ. ‘ಕೊರೊನಾದ ಕುರಿತು ಆಡಳಿತ ಎಚ್ಚರಿಕೆಯಿಂದ ಇರಬೇಕಾಗಿತ್ತು. ನನ್ನ ಕುಟುಂಬದವರಿಗೇನಾದರೂ ತೊಂದರೆ ಆದರೆ ಅಧಿಕಾರಿಗಳನ್ನು ಕ್ಷಮಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT