ಶನಿವಾರ, ಸೆಪ್ಟೆಂಬರ್ 25, 2021
22 °C
ಮಹಿಳಾ ಫುಟ್‌ಬಾಲ್‌ ಲೀಗ್‌: ಶುಭಾರಂಭ ಮಾಡಿದ ಎಫ್‌ಸಿ ಅಲಕಪುರ

ಸಮೀಕ್ಷಾ ಆಟದಲ್ಲಿ ಅರಳಿದ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

ಲುಧಿಯಾನ: ಸಮೀಕ್ಷಾ ಕಾಲ್ಚಳಕದಲ್ಲಿ ಅರಳಿದ ಏಕೈಕ ಗೋಲಿನ ನೆರವಿನಿಂದ ಎಫ್‌ಸಿ ಅಲಕಪುರ ತಂಡ ಮಹಿಳಾ ಫುಟ್‌ಬಾಲ್‌ ಲೀಗ್‌ನಲ್ಲಿ ಶುಭಾರಂಭ ಮಾಡಿದೆ.

ಗುರು ನಾನಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪೈಪೋಟಿಯಲ್ಲಿ ಅಲಕಪುರ ತಂಡ 1–0 ಗೋಲಿನಿಂದ ಹಾನ್ಸ್‌ ಎಫ್‌ಸಿ ವಿರುದ್ಧ ಗೆದ್ದಿತು.

ಬಲಿಷ್ಠ ಆಟಗಾರ್ತಿಯರನ್ನು ಹೊಂದಿದ್ದ ಹಾನ್ಸ್‌ ತಂಡ ಪಂದ್ಯದ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ನಂತರ ಅಲಕಪುರ ತಂಡ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿತು. ಮೊದಲಾರ್ಧದ ಆಟ ಕೊನೆಗೊಳ್ಳಲು ಕೆಲ ನಿಮಿಷ ಬಾಕಿ ಇದ್ದಾಗ ಸಮೀಕ್ಷಾ ಚೆಂಡನ್ನು ಗುರಿ ಸೇರಿಸಿ ಅಲಕಪುರ ತಂಡದ ಆಟಗಾರ್ತಿಯರ ಸಂಭ್ರಮಕ್ಕೆ ಕಾರಣರಾದರು.

ಎರಡನೇ ಕ್ವಾರ್ಟರ್‌ನಲ್ಲಿ ಹಾನ್ಸ್‌ ತಂಡಕ್ಕೆ ಸಮಬಲದ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಸ್ಟ್ರೈಕರ್‌ ಅನುಷ್ಕಾ ಸ್ಯಾಮುಯೆಲ್‌ ಇದನ್ನು ಕೈಚೆಲ್ಲಿದರು. ಎದುರಾಳಿ ಗೋಲುಪೆಟ್ಟಿಗೆ ಬಲತುದಿಯಿಂದ ಅನುಷ್ಕಾ ಒದ್ದ ಚೆಂಡನ್ನು ಅಲಕಪುರ ತಂಡದ ಗೋಲ್‌ಕೀಪರ್‌ ನೀಲಮ್‌ ಅಮೋಘ ರೀತಿಯಲ್ಲಿ ತಡೆದರು. ಹೀಗಿದ್ದರೂ ಹಾನ್ಸ್‌ ಆಟಗಾರ್ತಿಯರು ಎದೆಗುಂದಲಿಲ್ಲ. ಕೊನೆಯವರಗೂ ಗೋಲು ಗಳಿಸುವ ಪ್ರಯತ್ನ ಮುಂದುವರಿಸಿದ್ದರು. ಆದರೆ ಯಶಸ್ಸು ಮಾತ್ರ ಸಿಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು