ಮಂಗಳವಾರ, ಫೆಬ್ರವರಿ 18, 2020
24 °C

ಮಹಿಳಾ ಫುಟ್‌ಬಾಲ್‌ಗೆ ಪ್ರಾಯೋಜಕತ್ವ ಬೇಕು

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

prajavani

*ಈ ಬಾರಿಯ ಮಹಿಳಾ ಲೀಗ್‌ನಲ್ಲಿ ಗರಿಷ್ಠ (18) ಗೋಲು ಗಳಿಸಿದ ಆಟಗಾರ್ತಿ. ಲೀಗ್‌ನಲ್ಲಿ ಹ್ಯಾಟ್ರಿಕ್ ಕೂಡ ಗಳಿಸಿದ್ದೀರಿ. ಈ ಸಾಧನೆಗಳನ್ನು ಹೇಗೆ ವಿಶ್ಲೇಷಿಸುತ್ತೀರಿ?

ಗರಿಷ್ಠ ಗೋಲು ದಾಖಲಿಸಿದ ಸಾಧನೆ ಮಾಡಿರುವುದು ಖುಷಿ ತಂದಿದೆ. ಅಪರೂಪದ ಆಟಗಾರ್ತಿ ಆಗಬೇಕೆಂಬ ಬಯಕೆ ಹೊತ್ತುಕೊಂಡೇ ಕಳೆದ ಬಾರಿಯೂ ಕಣಕ್ಕೆ ಇಳಿದಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಈ ಬಾರಿ ತಂಡಕ್ಕೆ ಗೆಲುವು ತಂದುಕೊಡುವುದರ ಜೊತೆಯಲ್ಲಿ ಗರಿಷ್ಠ ಸ್ಕೋರು ಮಾಡಿದ ಆಟಗಾರ್ತಿ ಆಗಲೇಬೇಕೆಂದು ಪಣ ತೊಟ್ಟಿದ್ದೆ. ಆ ಗುರಿಯನ್ನು ಸಾಧಿಸಿದ್ದೇನೆ.

*ಮಹಿಳಾ ಫುಟ್‌ಬಾಲ್‌ ಲೀಗ್ ಬಗ್ಗೆ ನಿಮ್ಮ ಅನಿಸಿಕೆ ಏನು?

ನಾಲ್ಕು ವರ್ಷಗಳ ಹಿಂದೆ ಈ ಲೀಗ್ ಆರಂಭಿಸುವ ಮೂಲಕ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಘನ ಕಾರ್ಯವನ್ನು ಮಾಡಿದೆ. ಲೀಗ್ ಶುರುವಾದ ನಂತರ ಮಹಿಳಾ ಫುಟ್‌ಬಾಲ್ ಹೊಸ ದಿಸೆಯಲ್ಲಿ ಹೆಜ್ಜೆ ಹಾಕಿದೆ. ಪುರುಷರ ವಿಭಾಗವೂ ಸೇರಿದಂತೆ ಭಾರತದಲ್ಲಿ ಫುಟ್‌ಬಾಲ್ ಕ್ರೀಡೆಯ ಬೆಳವಣಿಗೆಗೆ ಈ ಲೀಗ್‌ನಿಂದ ಉತ್ತಮ ಕೊಡುಗೆ ಸಿಗಲಿದೆ ಎಂಬುದು ನನ್ನ ಅನಿಸಿಕೆ.

*ಮಹಿಳಾ ಲೀಗ್ ಅನ್ನು ಇಂಡಿಯನ್ ಸೂಪರ್ ಲೀಗ್ ರೀತಿ ದೊಡ್ಡ ಮಟ್ಟದಲ್ಲಿ ಬೆಳೆಸಲು ಏನು ಮಾಡಬೇಕು?

ಮಹಿಳಾ ಲೀಗ್ ಕೂಡ ಎತ್ತರಕ್ಕೆ ಬೆಳೆಯಬಲ್ಲದು. ಆದರೆ ಇದಕ್ಕಾಗಿ ಸ್ವಲ್ಪ ಶ್ರಮ ಹಾಕಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಪೊರೇಟ್ ಸಂಸ್ಥೆಗಳು ಪ್ರಾಯೋಜಕತ್ವ ವಹಿಸಲು ಮುಂದೆ ಬರಬೇಕು.

*ನೀವು ನೇಪಾಳ ತಂಡದ ಆಟಗಾರ್ತಿ. ಭಾರತದ ಮಹಿಳಾ ಫುಟ್‌ಬಾಲ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗುವ ಭರವಸೆ ಇದೆಯಾ?

ಖಂಡಿತ. ಭಾರತದಲ್ಲಿ ಮಹಿಳಾ ಫುಟ್‌ಬಾಲ್ ಉತ್ತಮ ಬೆಳವಣಿಗೆ ಕಾಣುತ್ತಿದೆ. ಇಲ್ಲಿನ ತಂಡವೂ ಬಲಿಷ್ಠವಾಗಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಸವಾಲನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ಹೊಂದಿದೆ.

*ಸುಮಾರು 20 ದಿನಗಳಿಂದ ಉದ್ಯಾನ ನಗರಿಯಲ್ಲಿದ್ದೀರಿ. ಹೇಗನಿಸಿತು?

ಭಾರತದ ಅತ್ಯುತ್ತಮ ನಗರಗಳಲ್ಲಿ ಒಂದು ಬೆಂಗಳೂರು. ಮೋಹಕ ವಾತಾವರಣ, ಆಪ್ತ ಜನರು. ಹೆಚ್ಚು ಸುತ್ತಾಡಲು ಆಗಲಿಲ್ಲ. ಈಗ (ಶುಕ್ರವಾರ) ಲೀಗ್ ಮುಕ್ತಾಯ ಕಂಡಿದೆ. ಇಲ್ಲಿ ಓಡಾಡಿಯೇ ವಾಪಸ್ ಹೋಗುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು