ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಫುಟ್ಬಾಲ್‌ ಆಟಗಾರರಿಗೆ ಸಾಮಾಜಿಕ ಜಾಲತಾಣದ ನಿಂದನೆಯಿಂದ ರಕ್ಷಣೆ!

Last Updated 17 ನವೆಂಬರ್ 2022, 4:42 IST
ಅಕ್ಷರ ಗಾತ್ರ

ದೋಹಾ: ತಮ್ಮ ನೆಚ್ಚಿನ ತಂಡಗಳು ಕ್ರಿಕೆಟ್‌, ಫುಟ್ಬಾಲ್‌ ಅಥವಾ ಯಾವುದೇ ಜನಪ್ರಿಯ ಆಟದಲ್ಲಿ ಸೋಲು ಅನುಭವಿಸಿದಾಗ ಟ್ರೋಲ್‌ ಮಾಡುವುದು, ದ್ವೇಷಿಸಿ ಪೋಸ್ಟ್‌ಗಳನ್ನು ಬರೆಯುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿದೆ. ವಿಶ್ವಕಪ್‌ ಫುಟ್ಬಾಲ್‌ ಸರಣಿಯ ವೇಳೆ ಆಟಗಾರರನ್ನು ಸಾಮಾಜಿಕ ಜಾಲತಾಣದ ಇಂತಹ ನಿಂದನೆಯಿಂದ ರಕ್ಷಿಸುವ ವ್ಯವಸ್ಥೆಗೆ ಫಿಫಾಮತ್ತು ವಿಶ್ವ ಫುಟ್ಬಾಲ್‌ ಆಟಗಾರರ ಒಕ್ಕೂಟ ಚಾಲನೆ ನೀಡಿವೆ.

ಕತಾರ್‌ನಲ್ಲಿನ ಸುಮಾರು 830 ಆಟಗಾರರು ವಿಶ್ವಕಪ್‌ ಸರಣಿಯ ವೇಳೆ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ ದ್ವೇಷದ ಪೋಸ್ಟ್‌ಗಳ ನಿಯಂತ್ರಣಕ್ಕಾಗಿ‘ಸಮರ್ಪಿತ ನಿಯಂತ್ರಿತ, ರಿಪೋರ್ಟ್‌ ಮತ್ತು ಮಾಡರೇಷನ್‌ ಸೇವೆ ಹೊಂದಲಿದ್ದಾರೆ’ ಎಂದು ಫಿಫಾಹೇಳಿದೆ.

ಭಾನುವಾರದಿಂದ ಫುಟ್ಬಾಲ್‌ ವಿಶ್ವಕಪ್‌ ಪ್ರಾರಂಭಗೊಳ್ಳಲಿದ್ದು, ಟ್ವಿಟರ್‌ ದ್ವೇಷದ ಪೋಸ್ಟ್‌ಗಳನ್ನು ಪತ್ತೆಹಚ್ಚುವ ಮತ್ತು ಮಾನಹಾನಿ ಪೋಸ್ಟ್‌ಗಳ ವಿರುದ್ಧ ನಿಯಮಗಳನ್ನು ಜಾರಿಗೊಳಿಸಲು ಪ್ರಯತ್ನಿಸುವ ತಂಡಗಳಲ್ಲಿ ಕೆಲಸ ಮಾಡುವ ಗುತ್ತಿಗೆದಾರರ ಗುಂಪನ್ನು ಕೆಲ ದಿನಗಳ ಹಿಂದೆ ವಜಾಗೊಳಿಸಿತ್ತು. ಹೀಗಾಗಿ ಫಿಫಾಅಧಿಕೃತವಾಗಿ ಇಂತಹ ಸೇವೆಗೆ ಮುಂದಾಗಿದೆ.

‘ತಂಡಗಳು, ಆಟಗಾರರು ಮತ್ತು ಇತರ ವೈಯಕ್ತಿಕ ಭಾಗಿದಾರರು ಕೂಡ ಮಾಡರೇಶನ್ ಸೇವೆಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ, ಇದು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ನಿಂದನೀಯ ಮತ್ತು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ತಕ್ಷಣವೇ ಮರೆಮಾಡುತ್ತದೆ, ಬಳಕೆದಾರರು ಮತ್ತು ಅವರ ಅನುಯಾಯಿಗಳು ಅವುಗಳನ್ನು ನೋಡದಂತೆ ತಡೆಯುತ್ತದೆ’ಫಿಫಾಹೇಳಿದೆ.

ಫುಟ್ಬಾಲ್‌ ಆಟಗಾರರನ್ನು ಗುರಿಯಾಗಿಟ್ಟುಕೊಂಡು ದ್ವೇಷವನ್ನು ಹ್ಬಬಿಸುವ ಕುರಿತು ಜೂನ್‌ನಲ್ಲಿಯೇ ಫಿಫಾವಿವರಿಸಿತ್ತು. ಹಿಂದಿನ ವರ್ಷ ನಡೆದ ಯುರೋಪಿಯನ್ ಚಾಂಪಿಯನ್‌ಶಿಪ್ ಮತ್ತು ಆಫ್ರಿಕನ್ ಕಪ್ ಆಫ್ ನೇಷನ್‌ ಸರಣಿ ನಂತರದ ಹಂತಗಳಲ್ಲಿ ಬಂದ ದ್ವೇಷದ ಪೋಸ್ಟ್‌ಗಳ ಸಂಶೋಧನೆ ವರದಿಯನ್ನೂ ಪ್ರಕಟಿಸಿತ್ತು. ಅದರ ಆಧಾರದಲ್ಲಿಯೇ ಈಗ ಆಟಗಾರರನ್ನು ಸಾರ್ವಜನಿಕ ನಿಂದನೆಯಿಂದ ರಕ್ಷಿಸಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT