ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲ್‌ಕೀಪರ್‌ ಅಲಿಸನ್‌ಗೆ ದಾಖಲೆಯ ಮೊತ್ತ!

ಇಟಲಿಯ ರೋಮಾ ತಂಡದ ಆಟಗಾರ
Last Updated 19 ಜುಲೈ 2018, 19:16 IST
ಅಕ್ಷರ ಗಾತ್ರ

ಲಂಡನ್‌ (ಎಎಫ್‌ಪಿ): ಐದು ವರ್ಷ ತಂಡವೊಂದರ ಗೋಲುಕೀಪಿಂಗ್ ಮಾಡಲು ₹597 ಕೋಟಿ ಮೊತ್ತದ ಒಪ್ಪಂದ!

ಹೌದು, ಬ್ರೆಜಿಲ್‌ನ ಫುಟ್‌ಬಾಲ್ ಆಟಗಾರ ಅಲಿಸನ್‌ ರಾಮ್‌ಸೆಸ್ ಬೇಕರ್‌ ಅವರು ಈ ಒಪ್ಪಂದಕ್ಕೆ ಸಹಿ ಹಾಕಲು ಸಜ್ಜಾಗಿದ್ದಾರೆ.

25 ವರ್ಷದ ಅಲಿಸನ್‌ ಸದ್ಯ ಇಟಲಿಯ ರೋಮಾ ತಂಡದ ಪರ ಆಡುತ್ತಿದ್ದು ಲಿವರ್‌ಪೂಲ್‌ ತಂಡದ ಜೊತೆ ಹೊಸ ಒಪ್ಪಂದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಚಾಂಪಿಯನ್ಸ್ ಲೀಗ್ ಟೂರ್ನಿಯ ಫೈನಲ್‌ನಲ್ಲಿ ನೀರಸ ಆಟ ಆಡಿದ್ದರಿಂದ ಗೋಲ್‌ ಕೀಪರ್‌ ಲಾರಿಸ್‌ ಕರಿಯುಸ್ ಅವರನ್ನು ಕೈಬಿಡಲು ಲಿವರ್‌ಪೂಲ್ ನಿರ್ಧರಿಸಿದ್ದು ಅಲಿಸನ್‌ ಅವರನ್ನು ಕರೆಸಿಕೊಳ್ಳಲು ಬಯಸಿದೆ. ಅಲಿಸನ್ ಮೇಲೆ ಚೆಲ್ಸಿ ತಂಡ ಕೂಡ ನೋಟ ಇರಿಸಿದೆ ಎನ್ನಲಾಗಿದೆ.

ಇತ್ತೀಚೆಗೆ ಅಲಿಸನ್ ಬಿಡುಗಡೆ ಮಾಡಿರುವ ವಿಡಿಯೊ ತುಣುಕೊಂದರಲ್ಲಿ ರೋಮಾ ತಂಡದ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತಿರುವುದು ಕಂಡು ಬಂದಿದೆ. ‘ಕೆಲವೇ ದಿನಗಳಲ್ಲಿ ಎಲ್ಲವನ್ನೂ ಹೇಳುತ್ತೇನೆ’ ಎಂದು ಕೂಡ ವಿಡಿಯೊದಲ್ಲಿ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT