ಮ್ಯಾಡ್ರಿಡ್: ರಿಯಲ್ ಮ್ಯಾಡ್ರಿಡ್ ತಂಡದ ಕೋಚ್ ಜಿನೆದಿನ್ ಜಿದಾನೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬುಧವಾರ ನಡೆದ ಲಾಲಿಗಾ ಪಂದ್ಯದಲ್ಲಿ ಅತ್ಲೆಟಿಕೊ ಮ್ಯಾಡ್ರಿಡ್ ತಂಡ ರಿಯಲ್ ಮ್ಯಾಡ್ರಿಡ್ ಎದುರು ಜಯ ಗಳಿಸಿತ್ತು. ಈ ಮೂಲಕ ಪ್ರಶಸ್ತಿ ಆಸೆ ಕಮರಿತ್ತು.
13 ಬಾರಿ ಯುರೋಪಿಯನ್ ಚಾಂಪಿಯನ್ ಆಗಿರುವರಿಯಲ್ ಮ್ಯಾಡ್ರಿಡ್ ಚಾಂಪಿಯನ್ಸ್ ಲೀಗ್ ಟೂರ್ನಿಯ ಸೆಮಿಫೈನಲ್‌ನಲ್ಲೂ ಸೋತಿತ್ತು. ತಂಡವನ್ನು ಚೆಲ್ಸಿ ಮಣಿಸಿತ್ತು. ಈ ಮೂಲಕ ಇದೇ ಮೊದಲ ಬಾರಿ 11 ಋತುಗಳಲ್ಲಿ ಪ್ರಶಸ್ತಿಯ ಬರ ಅನುಭವಿಸಿತ್ತು.