ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಶಿಬಿರಕ್ಕೆ 33 ಆಟಗಾರರು

ನಾಳೆಯಿಂದ ಬೆಂಗಳೂರಿನಲ್ಲಿ ಕಿರಿಯರ ರಾಷ್ಟ್ರೀಯ ಹಾಕಿ ಶಿಬಿರ
Last Updated 11 ಮೇ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನಲ್ಲಿ ಮೇ 13ರಂದು ಆರಂಭವಾಗಲಿರುವ ಭಾರತದ ಕಿರಿಯರ ಹಾಕಿ ತರಬೇತಿ ಶಿಬಿರಕ್ಕೆ 33 ಸಂಭಾವ್ಯ ಆಟಗಾರರನ್ನು ಹಾಕಿ ಇಂಡಿಯಾ ಆಯ್ಕೆ ಮಾಡಿದೆ.

ಫಿಟ್‌ನೆಸ್‌ ಹಾಗೂ ಮುಂಬರುವ ಎಂಟು ರಾಷ್ಟ್ರಗಳ ಹಾಕಿ ಟೂರ್ನಿಗೆ ಆಟಗಾರರನ್ನು ಗುರುತಿಸುವ ಭಾಗವಾಗಿ ಶಿಬಿರ ಆಯೋಜಿಸಲಾಗಿದೆ.

ಜೂನ್‌ 10ರಿಂದ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಟೂರ್ನಿ ನಡೆಯಲಿದೆ. ಬೆಲ್ಜಿಯಂ, ಜರ್ಮನಿ, ಬ್ರಿಟನ್‌, ಅರ್ಜೆಂಟೀನಾ, ಆಸ್ಟ್ರಿಯಾ, ನೆದರ್ಲೆಂಡ್ಸ್‌, ಸ್ಪೇನ್‌ ಹಾಗೂ ಭಾರತ ತಂಡಗಳು ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.

‘ಭಾರತಕ್ಕೆ ಇದು ಸವಾಲಿನ ಟೂರ್ನಿ ಯಾಗಿದ್ದು, ತಂಡದ ಆಯ್ಕೆಗೆ ತರಬೇತಿ ಶಿಬಿರ ಅನುಕೂಲವಾಗಲಿದೆ. ಒತ್ತಡದ ಪರಿಸ್ಥಿತಿಯಲ್ಲಿ ಆಟಗಾರರು ತೋರುವ ಸಾಮರ್ಥ್ಯವನ್ನು ತರಬೇತುದಾರರು ಗಮನಿಸಲಿದ್ದಾರೆ’ ಎಂದು ತಂಡದ ಹೈ ಪರ್ಫಾರ್ಮೆನ್ಸ್‌ ನಿರ್ದೇಶಕ ಡೇವಿಡ್‌ ಜಾನ್‌ ಹೇಳಿದರು.

ಸಂಭಾವ್ಯ ಆಟಗಾರರು
ಗೋಲ್‌ಕೀಪರ್‌ಗಳು
: ಪವನ್‌, ಪ್ರಶಾಂತ್‌ ಕುಮಾರ್‌ ಚೌಹಾನ್‌, ಸಾಹಿಲ್‌ ಕುಮಾರ್‌ ನಾಯಕ್‌
ಡಿಫೆಂಡರ್ಸ್‌: ಸುಮನ್‌ ಬೆಕ್‌, ಪ್ರತಾಪ್‌ ಲಾಕ್ರಾ, ಸಂಜಯ್‌, ಸುಂದ್ರಮ್‌ ಸಿಂಗ್‌, ಮನದೀಪ್‌ ಮೊರ್‌, ಪರಮ್‌ ಪ್ರೀತ್‌ ಸಿಂಗ್‌, ದೀನಚಂದ್ರ ಸಿಂಗ್‌ ಮೊಯಿ ರಂಗ್‌ದೆಮ್‌, ನಬಿನ್‌ ಕುಜುರ್‌, ಶಾರದಾನಂದ್‌ ತಿವಾರಿ, ನೀರಜ್‌ ಕುಮಾರ್‌
ಮಿಡ್‌ಫೀಲ್ಡ್: ಸುಖ್‌ಮನ್‌ ಸಿಂಗ್‌, ಗ್ರೆಗೊರಿ ಕ್ಸೆಸ್‌, ಅಂಕಿತ್‌ ಪಾಲ್‌, ಆಕಾಶ್‌ದೀಪ್‌ ಸಿಂಗ್‌, ವಿಷ್ಣುಕಾಂತ್‌ ಸಿಂಗ್‌, ಗೋಪಿ ಕುಮಾರ್‌, ವಿಶಾಲ್‌ ಅಂಟಿಲ್‌, ಸೂರ್ಯ ಎನ್‌.ಎಂ, ಮಣಿಂದರ್‌ ಸಿಂಗ್‌, ರವಿಚಂದ್ರ ಸಿಂಗ್‌ ಮೊಯಿರಂಗ್‌ದೆಮ್‌
ಫಾರ್ವರ್ಡ್‌: ಸುದೀಪ್‌ ಚಿರ್ಮಕೊ, ರಾಹುಲ್‌ ಕುಮಾರ್‌, ಉತ್ತಮ್‌ ಸಿಂಗ್‌, ಎಸ್‌. ಕಾರ್ತಿ, ದಿಲ್‌ಪ್ರೀತ್‌ ಸಿಂಗ್‌, ಅರಾಯ್‌ಜೀತ್‌ ಸಿಂಗ್‌ ಹುಂದಲ್‌, ಅಮನ್‌ದೀಪ್‌ ಸಿಂಗ್‌, ಪ್ರಭ್‌ಜೋತ್‌ ಸಿಂಗ್‌, ಶಿವಂ ಆನಂದ್‌, ಅರ್ಶದೀಪ್‌ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT