ಶನಿವಾರ, ಏಪ್ರಿಲ್ 1, 2023
28 °C

ಕೆಎಸ್‌ಎಚ್‌ಎ ಎ ಡಿವಿಷನ್ ಹಾಕಿ ಟೂರ್ನಿ: ದರ್ಶನ್ ಮಿಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದರ್ಶನ್ ಡಿ.ಎಸ್‌. ಗಳಿಸಿದ ನಾಲ್ಕು ಗೋಲುಗಳ ಬಲದಿಂದ ಕರ್ನಾಟಕ ಅರಣ್ಯ ಇಲಾಖೆ ತಂಡವು ಕೆಎಸ್‌ಎಚ್‌ಎ ಎ ಡಿವಿಷನ್ ಹಾಕಿ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು. 

ಶನಿವಾರ ನಡೆದ ಪಂದ್ಯದಲ್ಲಿ ಅರಣ್ಯ ಇಲಾಖೆ 7–2ರಿಂದ ಎಚ್‌ಎಂಟಿ ತಂಡವನ್ನು ಪರಾಭವಗೊಳಿಸಿತು. ದರ್ಶನ್‌ 16, 29, 42 ಮತ್ತು 52ನೇ ನಿಮಿಷಗಳಲ್ಲಿ ಕೈಚಳಕ ತೋರಿದರು. ವಿಜೇತ ತಂಡಕ್ಕಾಗಿ ಮಿಥುನ್ ಬಿಜವಾಡ (12ನೇ ನಿ.), ನಾಗರಾಜ (46ನೇ ನಿ.), ನವೀನ್ ಕೆ.ಎ. (54ನೇ ನಿ.) ಗೋಲು ದಾಖಲಿಸಿದರು. ಎಚ್ಎಂಟಿ ಪರ ಕಾರ್ತಿಕ್‌ (14ನೇ ನಿ.) ಮತ್ತು ಮೊಸಿನ್‌ (48ನೇ ನಿ.) ಗೋಲು ಹೊಡೆದರು. ಮತ್ತೊಂದು ಪಂದ್ಯದಲ್ಲಿ ಯಂಗ್‌ಸ್ಟಾರ್ ಹಾಕಿ ಕ್ಲಬ್‌, ರಾಯಚೂರು 4–2ರಿಂದ ಗುರು ಕ್ಲಬ್ ತಂಡಕ್ಕೆ ಸೋಲುಣಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು