ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಸ್ತಿ ಟ್ರಯಲ್ಸ್‌ ನಡೆಸುವುದಾಗಿ ಹೇಳಿದ ಅಡ್‌ಹಾಕ್‌ ಸಮಿತಿ

Published 9 ಮಾರ್ಚ್ 2024, 16:05 IST
Last Updated 9 ಮಾರ್ಚ್ 2024, 16:05 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಏಷ್ಯನ್ ಚಾಂಪಿಯನ್‌ಷಿಪ್ಸ್ ಮತ್ತು ಒಲಿಂಪಿಕ್ ಕ್ವಾಲಿಫೈರ್ಸ್‌ಗೆ ನಿಗದಿಯಂತೆ ಆಯ್ಕೆ ಟ್ರಯಲ್ಸ್‌ಅನ್ನು ತಾನೇ ನಡೆಸುವುದಾಗಿ ಭಾರತ ಒಲಿಂ‍ಪಿಕ್ ಸಂಸ್ಥೆ ನೇಮಿಸಿರುವ ಅಡ್‌ಹಾಕ್ ಸಮಿತಿ ಶನಿವಾರ ತಿಳಿಸಿದೆ. ಅರ್ಹತೆ ಪಡೆದವರ ಹೆಸರುಗಳನ್ನು ಭಾರತ ಕುಸ್ತಿ ಫೆಡರೇಷನ್‌ ಮುಖಾಂತರ ವಿಶ್ವ ಕುಸ್ತಿ ಸಂಸ್ಥೆಗೆ (ಯುಡಬ್ಲ್ಯುಡಬ್ಲ್ಯು) ಕಳಿಸುವುದಾಗಿಯೂ ಸಮಿತಿ ತಿಳಿಸಿದೆ.

ಯುಡಬ್ಲ್ಯುಡಬ್ಲ್ಯು ಶುಕ್ರವಾರ ಕುಸ್ತಿ ಫೆಡರೇಷನ್‌ಗೆ ಬೆನ್ನಿಗೆ ನಿಂತಿದ್ದು ಫೆಡರೇಷನ್‌ ಕಳಿಸಿದ ಪ್ರವೇಶಗಳನ್ನು ಮಾತ್ರ ಮಾನ್ಯ ಮಾಡುವುದಾಗಿ ಹೇಳಿತ್ತು. ಬೇರೆ ಯಾವುದೇ ಸಂಸ್ಥೆ, ಫೆಡರೇಷನ್ ಪಾತ್ರವನ್ನು ನಿರ್ವಹಿಸುವಂತಿಲ್ಲ ಎಂದೂ ಸ್ಪಷ್ಟಪಡಿಸಿತ್ತು.

ಆದರೆ ಅಡ್‌ಹಾಕ್ ಸಮಿತಿ ಶನಿವಾರ ಹೇಳಿಕೆ ನೀಡಿದ್ದು, ಟ್ರಯಲ್ಸ್‌ ತಾನೇ ನಡೆಸಲಿದ್ದು ಆಯ್ಕೆಯಾದವರ ಹೆಸರುಗಳನ್ನು ಫೆಡರೇಷನ್‌ಗೆ ಕಳುಹಿಸುವುದಾಗಿ ಹೇಳಿದೆ.

ಅಡ್‌ಹಾಕ್‌ ಸಮಿತಿಯು ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆಯಲಿರುವ ಎರಡು ಅಂತರರಾಷ್ಟ್ರೀಯ ಟೂರ್ನಿಗಳಿಗೆ ಮಾರ್ಚ್‌ 10 ಮತ್ತು 11ರಂದು ಸೋನಿಪತ್ ಮತ್ತು ಪಟಿಯಾಲಾದಲ್ಲಿ ಟ್ರಯಲ್ಸ್ ನಿಗದಿಯಾಗಿದೆ. ಸೋನಿಪತ್‌ನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಪುರುಷರ ವಿಭಾಗದ ಫ್ರೀಸ್ಟೈಲ್ ಮತ್ತು ಗ್ರೀಕೊ ರೋಮನ್ ಟ್ರಯಲ್ಸ್ ಇವೆ. ಪಟಿಯಾಲಾದ ಎನ್‌ಐಎಸ್‌ನಲ್ಲಿ ಮಹಿಳಾ ಕುಸ್ತಿಪಟುಗಳಿಗೆ ಟ್ರಯಲ್ಸ್‌ ನಡೆಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT