ಕರಾಚಿ : ಪಹಲ್ಗಾಮ್ನಲ್ಲಿ ಉಗ್ರರ ದಾಳಿಯ ನಂತರ ಭಾರತವು ಮಧ್ಯ ಏಷ್ಯನ್ ವಾಲಿಬಾಲ್ ಟೂರ್ನಿಯಿಂದ ಭಾರತ ಹಿಂದೆಸರಿದಿತ್ತು. ಪಾಕಿಸ್ತಾನ ಆತಿಥ್ಯದಲ್ಲಿ ನಿಗದಿಯಾಗಿದ್ದ ಈ ಟೂರ್ನಿಯನ್ನು ಈಗ ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್ಗೆ ಸ್ಥಳಾಂತರಿಸಲಾಗಿದೆ ಎಂದು ಪಾಕಿಸ್ತಾನ ಫೆಡರೇಷನ್ನ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಸೆಂಟ್ರಲ್ ಏಷ್ಯಾ ವಾಲಿಬಾಲ್ ಸಂಸ್ಥೆ (ಸಿಎವಿಎ) ಈ ನಿರ್ಧಾರಕ್ಕೆ ಬಂದಿದೆ. ‘ಭಾರತ ಹಿಂದೆ ಸರಿದಿದ್ದರೂ, ಟೂರ್ನಿಯನ್ನು ಸ್ಥಳಾಂತರಿಸುತ್ತಿರುವುದು ನಿರಾಸೆ ಮೂಡಿಸಿದೆ. ಆದರೆ ನಾವು ಸಿಎವಿಎ ಸರ್ವಸದಸ್ಯರ ಸಮಿತಿ ಭಾವನೆಯನ್ನು ಅರ್ಥಮಾಡಿಕೊಳ್ಳುತ್ತಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನ, ಇರಾನ್, ತುರ್ಕಮೆನಿಸ್ತಾನ, ಕಿರ್ಗಿಸ್ಥಾನ, ತಾಜಿಕಿಸ್ತಾನ, ಉಜ್ಬೇಕಿಸ್ತಾನ ತಂಡಗಳು ಕಣದಲ್ಲಿವೆ. ಟೂರ್ನಿಯ ದಿನಾಂಕ ಬದಲಾಗಿಲ್ಲ. ಮೇ 28ರಿಂದ ಟೂರ್ನಿ ನಿಗದಿಯಾಗಿದೆ.

ಟೂರ್ನಿಯಿಂದ ಭಾರತ ಹಿಂದೆಸರಿದಿದೆ ಎಂದು ಪಾಕಿಸ್ತಾನ ವಾಲಿಬಾಲ್ ಫೆಡರೇಷನ್ ಅಧಿಕಾರಿ ಅಬ್ದುಲ್ ಅಹದ್ ಏ. 27ರಂದು ಪ್ರಕಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.