ನವದೆಹಲಿ: ಪ್ಯಾರಿಸ್ನಲ್ಲಿ ಇದೇ ತಿಂಗಳು ಆರಂಭವಾಗಲಿರುವ ಒಲಿಂಪಿಕ್ ಕೂಟದ ವೀಕ್ಷಣೆಗೆ ತೆರಳಲು ಭಾರತದ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 30ರಷ್ಟು ಹೆಚ್ಚಳವಾಗಿದೆ ಎಂದು ಏರ್ಬಿಎನ್ಬಿ ಆನ್ಲೈನ್ ಬುಕಿಂಗ್ ಸಂಸ್ಥೆಯು ತಿಳಿಸಿದೆ.

ಒಲಿಂಪಿಕ್ಸ್ ಸಂದರ್ಭದಲ್ಲಿ ಪ್ಯಾರಿಸ್ಗೆ ತೆರಳಲಿರುವ ಭಾರತದ ಪ್ರವಾಸಿಗರು ಫ್ರಾನ್ಸ್ ದೇಶದ ನೈಸ್, ಅಬರ್ವಿಲಿಯರ್ಸ್, ಕೋಲಂಬಸ್ ಮತ್ತು ಸೇಂಟ್ ಒವೇನ್ ಸುರ್ ಸೀನ್ ನಗರಗಳಿಗೂ ಭೇಟಿ ನೀಡಲು ಒಲವು ತೋರಿದ್ದಾರೆ. ಈ ತಾಣಗಳಲ್ಲಿಯೂ ಒಲಿಂಪಿಕ್ಸ್ನ ಕೆಲವು ಕ್ರೀಡಾ ಸ್ಪರ್ಧೆಗಳು ಆಯೋಜನೆಗೊಂಡಿವೆ.

2023ರ ಜನವರಿ 1ರಿಂದ 2024ರ ಮಾರ್ಚ್ 31ರ ಅವಧಿಯಲ್ಲಿ ಭಾರತದಿಂದ ಪ್ರವಾಸಿಗರು ಪ್ರಯಾಣದ ಬುಕಿಂಗ್ ಮಾಡಿದ್ದಾರೆಂದು ಸಂಸ್ಥೆಯು ಮಾಹಿತಿ ನೀಡಿದೆ.

ಪ್ಯಾರಿಸ್ ಕುರಿತು ತಮ್ಮ ವೆಬ್ಸೈಟ್ನಲ್ಲಿ ಶೋಧ ನಡೆಸುವವರ ಸಂಖ್ಯೆಯು ಶೇ 40ರಷ್ಟು ಹೆಚ್ಚಳವಾಗಿದೆ ಎಂದೂ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.