ಬೆಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪುರುಷರ ಮತ್ತು ಮಹಿಳಾ ತಂಡದವರು ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು ಕೋಲಾರ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದಲ್ಲಿ ನಡೆದ ರಾಜ್ಯ ಸೀನಿಯರ್ ಲೀಗ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಪುರುಷರ ವಿಭಾಗದ ಫೈನಲ್ನಲ್ಲಿ ಆಳ್ವಾಸ್ ತಂಡ 35–23, 35–23 ನೇರ ಸೆಟ್ಗಳಿಂದ ಬೆಂಗಳೂರಿನ ಸ್ಕಲ್ವಿ ಅಸ್ತ್ರ ತಂಡವನ್ನು ಪರಾಭವಗೊಳಿಸಿತು.

ಬೆಂಗಳೂರಿನ ಕೆನರಾ ಬ್ಯಾಂಕ್ ತಂಡವು ಮೂರನೇ ಸ್ಥಾನ ಪಡೆಯಿತು.

ಸೆಮಿಫೈನಲ್ ಹಣಾಹಣಿಗಳಲ್ಲಿ ಆಳ್ವಾಸ್ ತಂಡ ಕೆನರಾ ಬ್ಯಾಂಕ್ ಎದುರೂ, ಸ್ಕಲ್ವಿ ಅಸ್ತ್ರ ತಂಡ ಆಳ್ವಾಸ್ ‘ಎ’ ವಿರುದ್ಧವೂ ನೇರ ಸೆಟ್ಗಳಿಂದ ಗೆದ್ದಿದ್ದವು.

ಮಹಿಳಾ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಆಳ್ವಾಸ್ ‘ಎ’ ತಂಡ 37–35, 35–31ರಲ್ಲಿ ಆಳ್ವಾಸ್ ‘ಬಿ’ ಎದುರು ಜಯಿಸಿತು. ಮಂಗಳೂರು ಜಿಲ್ಲಾ ತಂಡ ಮೂರನೇ ಸ್ಥಾನ ಪಡೆಯಿತು.

ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲಿ ಪುರುಷರ ವಿಭಾಗದಲ್ಲಿ 36 ಹಾಗೂ ಮಹಿಳಾ ವಿಭಾಗದಲ್ಲಿ 16 ತಂಡಗಳು ಭಾಗವಹಿಸಿದ್ದವು.

ಸ್ಕಲ್ವಿ ಅಸ್ತ್ರ ತಂಡದ ವಿಜಯ ಕುಮಾರ್ ಮತ್ತು ಆಳ್ವಾಸ್ ತಂಡದ ಜಯಲಕ್ಷ್ಮಿ ಅವರು ಕ್ರಮವಾಗಿ ಚಾಂಪಿಯನ್ಷಿಪ್ನ ಅತ್ಯುತ್ತಮ ಆಟಗಾರ ಮತ್ತು ಆಟಗಾರ್ತಿ ಪ್ರಶಸ್ತಿಗಳನ್ನು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.