ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತರಬೇತಿಗಾಗಿ ಜರ್ಮನಿಗೆ ಅನುರಾಣಿ

Published 9 ನವೆಂಬರ್ 2023, 16:32 IST
Last Updated 9 ನವೆಂಬರ್ 2023, 16:32 IST
ಅಕ್ಷರ ಗಾತ್ರ

ನವದೆಹಲಿ: ಚೀನಾದಲ್ಲಿ ಈಚೆಗೆ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ವಿಭಾಗದ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಅನುರಾಣಿ ಅವರು ತರಬೇತಿಗಾಗಿ ಜರ್ಮನಿಗೆ ತೆರಳಲಿದ್ದಾರೆ.

ಭಾರತ ಸರ್ಕಾರದ ಕ್ರೀಡಾ ಸಚಿವಾಲಯದ ಮಿಷನ್ ಒಲಿಂಪಿಕ್ ಸೆಲ್ ಅನುರಾಣಿ ಸೇರಿದಂಎ ಕೆಲವು ಕ್ರೀಡಾಪಟುಗಳಿಗೆ ಅನುಮತಿ ನೀಡಿದೆ.

ಜರ್ಮನಿಯಲ್ಲಿ ಕೋಚ್ ವೆರ್ನರ್ ಡೇನೀಲ್ಸ್‌ ಅವರ ಬಳಿ ಅನುರಾಣಿ ತರಬೇತಿ ಪಡೆಯಲಿದ್ದಾರೆ.

ಆರ್ಚರಿಪಟು ಧೀರಜ್ ಬೊಮ್ಮದೇವರ ಅವರು ದಕ್ಷಿಣ ಕೊರಿಯಾದಲ್ಲಿ ತರಬೇತಿ ಪಡೆಯುವರು. ಅಲ್ಲಿಯ ಕಿಮ್ ಆರ್ಚರಿ ಶಾಲೆಯಲ್ಲಿ ಕೋಚ್ ಸೋನಮ್ ಟಿಶೆರಿಂಗ್ ಭೂಟಿಯಾ ಅವರಿಂದ ತರಬೇತಿ ಪಡೆಯುವರು.

ಗ್ರಿಕೊ ರೋಮನ್ ಕುಸ್ತಿಪಟು ಸುನಿಲ್ ಕುಮಾರ್ ಅವರು  ಹಂಗರಿಯ ಬುಡಾಪೆಸ್ಟ್‌ನಲ್ಲಿ 68 ದಿನಗಳ ಕಾಲ ತರಬೇತಿ ಪಡೆಯಲು ಸಲ್ಲಿಸಿದ್ದ ಪ್ರಸ್ತಾವವನ್ನೂ ಅನುಮೋದಿಸಲಾಗಿದೆ. ಜುಡೊಕಾಗಳಾದ ವಿಜಯಕುಮಾರ್ ಯಾದವ್, ಟುಲಿಕಾ ಮಾನ್, ಯಶ್ ಗಣಗಾಸ್, ಅಸ್ಮಿತಾ ಡೇ, ಶ್ರದ್ಧಾ ಚೋಪಡೆ ಮತ್ತು ಹಿಮಾಂಶಿ ಟೊಕಸ್ ಅವರು ಕೋಚ್ ಯಶಪಾಲ್ ಶರ್ಮಾ ಅವರೊಂದಿಗೆ ಜಪಾನ್‌ಗೆ ತೆರಳುವರು. ಅಲ್ಲಿ ವಿಶೇಷ ತರಬೇತಿ ಹಾಗೂ ಕೆಲವು ಸ್ಪರ್ಧೆಗಳಲ್ಲಿ ಭಾಗವಹಿಸುವರು.

ಬ್ಯಾಡ್ಮಿಂಟನ್ ಆಟಗಾರ ಎಚ್‌.ಎಸ್. ಪ್ರಣಯ್ ಅವರಿಗೆ ಸ್ಟ್ರೇಂತ್‌ –ಕಂಡಿಷನಿಂಗ್ ಹಾಗೂ ಸೈಕಾಲಜಿ ನೆರವಿಗಾಗಿ ಅನುಮತಿ ನೀಡಲಾಗಿದೆ.  ಕೆ. ಶ್ರೀಕಾಂತ್ ಅವರಿಗೆ ಸ್ಟ್ರೇಂತ್–ಕಂಡೀಷನಿಂಗ್ ಮತ್ತು ಟ್ರೇನರ್ ವರುಣ ಕುಮಾರ್ ಅವರಿಗೆ ಚೀನಾ ಮಾಸ್ಟರ್ಸ್‌ ಪ್ರಸ್ತಾವವಗಳನ್ನೂ ಅನುಮೋದಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT