ಶಿಮ್ಕೆಟ್ (ಕಜಾಕಸ್ತಾನ): ಭಾರತದ ಅರ್ಜುನ್ ಬಬುತಾ–ಇಳವೆನಿಲ್ ವಳರಿವನ್ ಜೋಡಿಯು ಇಲ್ಲಿ ನಡೆಯುತ್ತಿರುವ 16ನೇ ಏಷ್ಯನ್ ಶೂಟಿಂಗ್ ಚಾಂಪಿಯನ್ಷಿಪ್ನ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.

ಶನಿವಾರ ನಡೆದ ಫೈನಲ್ನಲ್ಲಿ ಭಾರತದ ಜೋಡಿಯು ಚೀನಾದ ಡಿಂಗ್ಕೆ ಲು ಮತ್ತು ಶಿನ್ಲು ಪೆಂಗ್ ಅವರನ್ನು 17–10ರಿಂದ ಸೋಲಿಸಿತು. ಚೀನಾದ ಜೋಡಿಯು ಆರಂಭಿಕ ಮುನ್ನಡೆ ಸಾಧಿಸಿತ್ತು. ಬಳಿಕ ಗುರಿಯನ್ನು ಸುಧಾರಿಸಿಕೊಂಡ ಅರ್ಜುನ್–ಇಳವನಿಲ್, ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರು. ಅದರೊಂದಿಗೆ ಈ ಇಬ್ಬರೂ ಶೂಟರ್ಗಳು ಟೂರ್ನಿಯಲ್ಲಿ ತಲಾ ಎರಡು ಚಿನ್ನದ ಪದಕ ಗೆದ್ದ ಗೌರವಕ್ಕೆ ಪಾತ್ರರಾದರು.

ತಮಿಳುನಾಡಿನ ಶೂಟರ್ ಇಳವನಿಲ್ ಅವರು ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಶುಕ್ರವಾರ ಚಿನ್ನದ ಪದಕ ಜಯಿಸಿದ್ದರು. 26 ವರ್ಷ ವಯಸ್ಸಿನ ಬಬೂತಾ ಅವರು, ಪುರುಷರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಸ್ವರ್ಣ ಗೆದ್ದ ತಂಡದಲ್ಲಿದ್ದರು.

ಜೂನಿಯರ್ ವಿಭಾಗದ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಶಾಂಭವಿ ಶ್ರವಣ್ ಹಾಗೂ ನರೇನ್ ಪ್ರಣವ್ ಜೋಡಿಯು ಚಿನ್ನದ ಪದಕಕ್ಕೆ ಗುರಿಯಿಟ್ಟಿತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅವರು 16–12ರಿಂದ ಚೀನಾದ ತಾಂಗ್ ಹ್ಯುಕಿ–ಹಾನ್ ಯಿನಾನ್ ಜೋಡಿಯನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.