ಬೆಂಗಳೂರು: ಇದೇ ತಿಂಗಳ 24ರಿಂದ ನಡೆಯುವ ಎಎಎಸ್‌ಎಫ್ ಏಷ್ಯನ್ ಏಜ್ ಗ್ರೂಪ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಚೀನಾ ಮತ್ತು ಜಪಾನ್ ತಂಡಗಳು ಪಾಲ್ಗೊಳ್ಳಲಿವೆ.

2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ವೇದಿಕೆಯಾಗಿರುವ ಈ ಚಾಂಪಿಯನ್‌ಷಿಪ್ ಒಟ್ಟು ಒಂಬತ್ತು ದಿನಗಳ ಕಾಲ ನಡೆಯಲಿದೆ. ಇರಾನ್, ಜೋರ್ಡನ್, ಕುವೈತ್, ಮಾಲ್ಡೀವ್ಸ್, ನೇಪಾಳ, ಒಮನ್, ಸೌದಿ ಅರೇಬಿಯಾ, ತುರ್ಕಮೆನಿಸ್ತಾನ, ಯುಎಇ, ಉಜ್ಬೇಕಿಸ್ತಾನ ಸೇರಿದಂತೆ ಒಟ್ಟು 26 ದೇಶಗಳ 1,000ಕ್ಕೂ ಅಧಿಕ ಈಜುಪಟುಗಳು ಪದಕಗಳಿಗೆ ಪೈಪೋಟಿ ನಡೆಸುವ ನಿರೀಕ್ಷೆ ಇದೆ.

79 ಸದಸ್ಯರನ್ನೊಳಗೊಂಡ ಕಜಕಸ್ತಾನ ತಂಡ ಶನಿವಾರ ಉದ್ಯಾನನಗರಿಗೆ ಬರಲಿದೆ.

ಓಪನ್ (18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು), ಏಜ್ ಗ್ರೂಪ್–1 (15–17ವರ್ಷದೊಳಗಿನವರು) ಹಾಗೂ ಏಜ್ ಗ್ರೂಪ್–2 (14 ವರ್ಷ ಮತ್ತು ಅದಕ್ಕಿಂತ ಕೆಳಗಿನವರು) ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

‘ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಭಾರತದ ಈಜುಪಟುಗಳಿಗೆ ಈ ಚಾಂಪಿಯನ್‌ಷಿಪ್ ಉತ್ತಮ ವೇದಿಕೆಯಾಗಿದೆ’ ಎಂದು ಭಾರತದ ಈಜುಪಟು ಸಾಜನ್ ಪ್ರಕಾಶ್ ಹೇಳಿದ್ದಾರೆ.

ವೀರಧವಳ್ ಖಾಡೆ ಮತ್ತು ಶ್ರೀಹರಿ ನಟರಾಜ್ ಅವರೂ ಚಾಂಪಿಯನ್‌ಷಿಪ್‌ನಲ್ಲಿ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಹಿಂದಿನ ಆವೃತ್ತಿಯಲ್ಲಿ ಭಾರತವು ಒಟ್ಟು 40 ಪದಕ (5 ಚಿನ್ನ, 13 ಬೆಳ್ಳಿ ಮತ್ತು 22 ಕಂಚು) ಗೆದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.