ನವದೆಹಲಿ: ರಾಷ್ಟ್ರೀಯ ಚಾಂಪಿಯನ್ ವೆಲವನ್ ಸೆಂಥಿಲ್‌ಕುಮಾರ್ ಮತ್ತು ರತಿಕಾ ಶೀಲನ್ ಅವರು ಚೀನಾದ ಡೇಲಿಯನ್‌ನಲ್ಲಿ ನಡೆಯುವ 22ನೇ ಏಷ್ಯನ್ ಟೀಂ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಭಾರತದ ಪುರುಷರ ಮತ್ತು ಮಹಿಳೆಯರ ಸವಾಲನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ.

2023ರ ರಾಷ್ಟ್ರೀಯ ಕ್ರೀಡಾಕೂಟದ ಚಾಂಪಿಯನ್ ಅಭಯ್ ಸಿಂಗ್, ರಾಹುಲ್ ಬೈಥಾ ಮತ್ತು ಸೂರಜ್ ಚಂದ್ ಪುರುಷರ ತಂಡದಲ್ಲಿದ್ದಾರೆ. ಮಹಿಳೆಯರ ತಂಡದಲ್ಲಿ ಪೂಜಾ ಎ.ಆರ್, ಸುನೀತಾ ಪಟೇಲ್ ಮತ್ತು ಜಾನೆಟ್ ವಿಧಿ ಇದ್ದಾರೆ.

ಚೆನ್ನೈನಲ್ಲಿರುವ ಇಂಡಿಯನ್ ಸ್ಕ್ವಾಷ್ ಅಂಡ್ ಟ್ರಯಥ್ಲಾನ್ ಅಕಾಡೆಮಿನಲ್ಲಿ ಆಯ್ಕೆ ಟ್ರಯಲ್ಸ್ ನಡೆಸಿದ ಬಳಿಕ ರಾಷ್ಟ್ರೀಯ ತಂಡವನ್ನು ಸ್ಕ್ವಾಷ್ ರಾಕೆಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಆರ್‌ಎಫ್‌ಐ) ಶುಕ್ರವಾರ ಪ್ರಕಟಿಸಿದೆ.

ಕಳೆದ ವರ್ಷ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಕ್ವಾಷ್ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ದಾಖಲೆಯ ಐದು ಪದಕಗಳನ್ನು ಗೆದ್ದಿದ್ದರು. ಇದರಿಂದ ಉತ್ತೇಜನಗೊಂಡಿರುವ ಎಸ್‌ಆರ್‌ಎಫ್‌ಐ, 2026ರ ಏಷ್ಯನ್ ಕ್ರೀಡಾಕೂಟ ಮತ್ತು 2028ರ ಲಾಸ್ ಏಂಜಲೀಸ್‌ನ ಒಲಿಂಪಿಕ್ಸ್ ಅನ್ನು ಗಮನದಲ್ಲಿಟ್ಟುಕೊಂಡು ಯುವ ಆಟಗಾರರಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.