ಅಸ್ತಾನ (ಕಜಕಸ್ತಾನ): ಭಾರತದ ವೇಟ್ಲಿಫ್ಟರ್ಗಳಾದ ಮೀನಾಕ್ಷಿ, ಸಾಕ್ಷಿ, ಪೂಜಾ ರಾಣಿ, ಹಿತೇಶ್ ಗುಲಿಯಾ ಹಾಗೂ ಜುಗನೂ ಇಲ್ಲಿ ನಡೆಯುತ್ತಿರುವ ಏಷ್ಯನ್ ಯೂತ್ ಹಾಗೂ ಜೂನಿಯರ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಫೈನಲ್ ತಲುಪಿದ್ದಾರೆ.

ಇದರೊಂದಿಗೆ ವಿವಿಧ ವಿಭಾಗಗಳಲ್ಲಿ ಭಾರತಕ್ಕೆ 11 ಪದಕಗಳು ಖಚಿತವಾಗಿದೆ.

ಶನಿವಾರ ಸೆಮಿಫೈನಲ್ ಪಂದ್ಯಗಳಲ್ಲಿ ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಮೀನಾಕ್ಷಿ ಅವರು ಟರ್ಕಿಯ ನರ್ಸಲೆನ್ ಯಾಲ್ಗೆಟ್ಟೆಕಿನ್ ಅವರನ್ನು ಮಣಿಸಿದರು. ಸಾಕ್ಷಿ ಅವರು 54 ಕೆ.ಜಿ. ವಿಭಾಗದಲ್ಲಿ ಉಜ್ಬೇಕಿಸ್ತಾನದ ಫೆರೂಝಾ ಕಝಕೋವಾ ವಿರುದ್ಧ ಜಯಿಸಿದರು. ಒಲಿಂಪಿಯನ್ ಪೂಜಾ, 80 ಕೆ.ಜಿ. ವಿಭಾಗದಲ್ಲಿ ಟರ್ಕಿಯ ಎಲಿಫ್ ಗುನೆರಿ ಅವರಿಗೆ ಸೋಲಿನ ರುಚಿ ತೋರಿಸಿದರು.

80+ ಕೆ.ಜಿ. ವಿಭಾಗದಲ್ಲಿ ಭಾರತದ ನೂಪುರ್ ಈಗಾಗಲೇ ಫೈನಲ್ ತಲುಪಿದ್ದಾರೆ.

ಪುರುಷರ 70 ಕೆ.ಜಿ. ವಿಭಾಗದಲ್ಲಿ ಹಿತೇಶ್ ಅವರು ಫ್ರಾನ್ಸ್ನ ಮಾಕನ್ ಟ್ರವೋರ್ ವಿರುದ್ಧ ಜಯಿಸಿದರೆ, 85 ಕೆ.ಜಿ. ವಿಭಾಗದಲ್ಲಿ ಜುಗನೂ ಅವರು ಇಂಗ್ಲೆಂಡ್ನ ಟೀಗನ್ ಸ್ಕಾಟ್ ಅವರನ್ನು ಮಣಿಸಿ ಪದಕ ಖಚಿತಪಡಿಸಿಕೊಂಡರು.

ಪುರುಷರ 65 ಕೆ.ಜಿ. ವಿಭಾಗದಲ್ಲಿ ಅಭಿನಾಶ್ ಜಾಮವಾಲ್ ಅವರು ಸೆಮಿಫೈನಲ್ ತಲುಪಿದ್ದು, ಭಾರತಕ್ಕೆ ಪದಕ ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.