ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಮಹಿಳಾ ಕುಸ್ತಿಪಟುಗಳಿಗೆ 6 ಪದಕ

Published 15 ಏಪ್ರಿಲ್ 2024, 15:06 IST
Last Updated 15 ಏಪ್ರಿಲ್ 2024, 15:06 IST
ಅಕ್ಷರ ಗಾತ್ರ

ಬಿಷ್ಕೆಕ್‌ (ಕಿರ್ಗಿಸ್ತಾನ): ಭಾರತದ ಕುಸ್ತಿಪಟುಗಳಾದ ಅಂಜು ಮತ್ತು ಹರ್ಷಿತಾ ಇಲ್ಲಿ ನಡೆಯುತ್ತಿರುವ ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಪದಕ ಗೆದ್ದರು.

ರೈಲ್ವೇಸ್‌ನ ಕುಸ್ತಿಪಟು ಅಂಜು ಭಾನುವಾರ ನಡೆದ 53 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಅವರು ಉತ್ತರ ಕೊರಿಯಾದ ಜಿ ಹಯಾಂಗ್ ಕಿಮ್ ಅವರಿಗೆ ಮಣಿದರು. ಒಂದೇ ಒಂದು ಅಂಕ ಗಳಿಸಲು ಅಂಜು ಅವರಿಗೆ ಸಾಧ್ಯವಾಗದೆ, ತಾಂತ್ರಿಕ ಕೌಶಲದ ಆಧಾರದಲ್ಲಿ ಚಿನ್ನವನ್ನು ಕಳೆದುಕೊಂಡರು.

ಸೆಮಿಫೈನಲ್‌ನಲ್ಲಿ 9-6 ರಿಂದ ಚೀನಾದ ಚುನ್ ಲೀ ಅವರನ್ನು ಹಿಮ್ಮೆಟ್ಟಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದ್ದರು.

72 ಕೆಜಿ ವಿಭಾಗದ ಫೈನಲ್‌ನಲ್ಲಿ ಹರ್ಷಿತಾ ಅವರು 2–5ರಿಂದ ಚೀನಾದ ಕಿಯಾನ್ ಜಿಯಾಂಗ್‌ ವಿರುದ್ಧ ಪರಾಭವಗೊಂಡರು. ಅವರು ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಓಜೋಡಾ ಜರಿಪ್‌ಬೋವಾ ಅವರನ್ನು ಸೋಲಿಸಿದ್ದರು.

 ಮನೀಶಾ ಭನ್ವಾಲಾ (62 ಕೆಜಿ) ಮತ್ತು ಅಂತಿಮ್ ಕುಂದು (65 ಕೆಜಿ) ಕಂಚಿನ ಪದಕ ಗೆದ್ದರು.

ಒಟ್ಟಾರೆಯಾಗಿ ಭಾರತದ ಮಹಿಳಾ ಕುಸ್ತಿಪಟುಗಳು ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಗೆದ್ದರು.ಈ ಮೊದಲು ರಾಧಿಕಾ 68 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದರೆ, ಶಿವಾನಿ ಪವಾರ್ ಶನಿವಾರ ಕಂಚಿನ ಪದಕ ಜಯಿಸಿದ್ದರು.

ಪುರುಷರ ಫ್ರೀಸ್ಟೈಲ್ ಕುಸ್ತಿಯಲ್ಲಿ ಉದಿತ್ (57 ಕೆಜಿ) ಬೆಳ್ಳಿ ಗೆದ್ದರೆ, ಅಭಿಮನ್ಯು (70 ಕೆಜಿ) ಮತ್ತು ವಿಕ್ಕಿ (97 ಕೆಜಿ) ತಮ್ಮ ವಿಭಾಗಗಳಲ್ಲಿ ಕಂಚಿನ ಪದಕ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT