ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಯೂತ್ ನೆಟ್‌ಬಾಲ್: ಭಾರತ ಶುಭಾರಂಭ

Published 10 ಜೂನ್ 2023, 12:53 IST
Last Updated 10 ಜೂನ್ 2023, 12:53 IST
ಅಕ್ಷರ ಗಾತ್ರ

ಜಿಯಾಂಜು, ಕೊರಿಯಾ:  ಭಾರತ ಮಹಿಳಾ ತಂಡದವರು ಶನಿವಾರ ಇಲ್ಲಿ ಆರಂಭವಾದ ಏಷ್ಯನ್ ಯೂತ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು.

ಮೊದಲ ಪಂದ್ಯದಲ್ಲಿ ಭಾರತ ಬಳಗವು 44–40ರಿಂದ ಥಾಯ್ಲೆಂಡ್ ವಿರುದ್ಧ ಜಯಿಸಿತು.

ಭಾರತ ಬಳಗವು ಮೊದಲ ಕ್ವಾರ್ಟರ್‌ನಲ್ಲಿ 11–9 ಮುನ್ನಡೆ ಸಾಧಿಸಿತು. ಎರಡನೇ ಕ್ವಾರ್ಟರ್‌ನಲ್ಲಿ 13–13ರ ಸಮಬಲ, ಮೂರನೇ ಕ್ವಾರ್ಟರ್‌ನಲ್ಲಿ 12–10ರ ಮುನ್ನಡೆ ಗಳಿಸಿತು.

ತುರುಸಿನ ಹೋರಾಟ ಕಂಡುಬಂದ ಕೊನೆಯ ಕ್ವಾರ್ಟರ್‌ನಲ್ಲಿ 8–8ರ ಸಮಬಲ ಸಾಧಿಸುವಲ್ಲಿ ಉಭಯ ತಂಡಗಳು ಯಶಸ್ವಿಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT