ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ನೂಕರ್‌: ಫೈನಲ್‌ಗೆ ರಿಕ್ಟರ್‌– ಲೊಮ್‌ನಾ

Published 26 ಆಗಸ್ಟ್ 2024, 16:23 IST
Last Updated 26 ಆಗಸ್ಟ್ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ಜರ್ಮನಿಯ ಕ್ರಿಸ್ಟಿಯನ್ ರಿಕ್ಟರ್ ಮತ್ತು ಥಾಯ್ಲೆಂಡ್‌ನ ಲೊಮ್‌ನಾ ಇಸ್ಸಾರಂಗ್‌ಕುನ್‌ ಅವರು ಸೋಮವಾರ ತಮ್ಮ ಎದುರಾಳಿಗಳ ವಿರುದ್ಧ ಸುಲಭ ಗೆಲುವಿನೊಡನೆ ಐಬಿಎಸ್‌ಎಫ್‌ ವಿಶ್ವ 17 ವರ್ಷದೊಳಗಿನವರ ಸ್ನೂಕರ್‌ ಚಾಂಪಿಯನ್‌ಷಿಪ್‌ನ ಫೈನಲ್ ತಲುಪಿದರು.

ಕರ್ನಾಟಕ ರಾಜ್ಯ ಬಿಲಿಯಡ್ಸ್‌ ಸಂಸ್ಥೆಯಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ರಿಕ್ಟರ್‌ 4–2 ರಿಂದ (66 (60)–11, 4–101 (101), 80 (46)–21, 31–72, 75–40, 68–55) ವೇಲ್ಸ್‌ನ ರೀಲಿ ಪಾವೆಲ್‌ ಅವರನ್ನು ಸೋಲಿಸಿದರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಲೊಮ್‌ನಾ ಕೂಡ 4–2 ಅಂತರದಿಂದ (58–27, 30–67, 102 (87)–16, 86 (57)–32, 34–68, 54–34) ಪೋಲೆಂಡ್‌ನ ಮಿಚಲ್ ಝುಬರ್‌ಝಿಕ್ ಅವರನ್ನು ಪರಾಭವಗೊಳಿಸಿದರು.

ರಿಕ್ಟರ್‌ ಆಟದಲ್ಲಿ ಕಡಿಮೆ ತಪ್ಪುಗಳಿದ್ದವು. ದೊಡ್ಡ ಬ್ರೇಕ್‌ಗಳೊಂದಿಗೆ ಅವರು ಉತ್ತಮ ಲಯದಲ್ಲೂ ಇದ್ದರು. ಟೇಬಲ್‌ನಲ್ಲಿ ಅವರ ಆ್ಯಂಗಲ್‌ಗಳೂ ಆಸಕ್ತಿದಾಯಕವಾಗಿದ್ದವು.

ಕ್ವಾರ್ಟರ್‌ಫೈನಲ್ಸ್ ಫಲಿತಾಂಶ: ಜರ್ಮನಿಯ ರಿಕ್ಟರ್‌ಗೆ 3–0 ಯಿಂದ ಭಾರತದ ಜಬೇಝ್ ನವೀನ್ ಕುಮಾರ್ ವಿರುದ್ಧ ಜಯ, ಪಾವೆಲ್‌ಗೆ 3–1 ರಿಂದ ಹಾಂಗ್‌ಕಾಂಗ್‌ನ ಸ್ಕಿ ಚಾನ್ ವಿರುದ್ಧ ಗೆಲುವು, ಝುಬರ್‌ಝಿಕ್‌ ಅವರಿಗೆ 3–1 ರಿಂದ ಝಿಯಾದ್ ಅಲ್ಗಾಬ್ಬಾನಿ (ಸೌದಿ ಅರೇಬಿಯಾ) ವಿರುದ್ಧ ಜಯ, ಇಸ್ಸಾರಂಗ್‌ಕುನ್‌ ಅವರಿಗೆ 3–1 ರಿಂದ ಪರ್ಹಾಮ್ ಕಝೆಮಿಮೊಗದ್ದಾಮ್ (ಇರಾನ್) ವಿರುದ್ಧ ಗೆಲುವು.

ಮಹಿಳೆಯರ 21 ವರ್ಷದೊಳಗಿನವರ ವಿಭಾಗದ ಪಂದ್ಯಗಳಲ್ಲಿ ಭಾರತದ ಆರ್‌.ಟಿ.ಮೋಹಿತಾ 2–1 ರಿಂದ ಜಿಯಾ ಸೆಹಗಲ್ ವಿರುದ್ಧ, ನತಾಶಾ ಚೇತನ್ 2–0 ಯಿಂದ ಸೌದಿ ಅರೇಬಿಯಾದ ನೂತ್‌ ಅಲ್ಬಾಲವಿ ವಿರುದ್ಧ, ಇರಾನ್‌ನ ಸೆತಾಯೇಶ್‌ ಅಮಿರ್‌ಝಿಮಿ 2–1 ರಿಂದ ಭಾರತದ ಸಮೀಕ್ಷಾ ದೇವನ್‌ ವಿರುದ್ಧ ಜಯಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT