ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಶೂಟಿಂಗ್: ಅವನಿ ವಿಶ್ವದಾಖಲೆ

Last Updated 8 ಜೂನ್ 2022, 3:00 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ ಚಾಂಪಿಯನ್‌ ಅವನಿ ಲೇಖರಾ ಅವರು ಫ್ರಾ‌ನ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಪ್ಯಾರಾ ಶೂಟಿಂಗ್‌ನಲ್ಲಿ ವಿಶ್ವದಾಖಲೆ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು.

ಮಂಗಳವಾರ ನಡೆದ ಮಹಿಳೆಯರ 10 ಮೀ. ಏರ್‌ ರೈಫಲ್‌ ವಿಭಾಗದಲ್ಲಿ ಅವರು 250.6 ಸ್ಕೋರ್‌ ಕಲೆಹಾಕಿ ಅಗ್ರಸ್ಥಾನ ಪಡೆದರು. 20 ಹರೆಯದ ಅವನಿ ತಮ್ಮದೇ ಹೆಸರಿನಲ್ಲಿದ್ದ ದಾಖಲೆ (249.6) ಉತ್ತಮಪಡಿಸಿಕೊಂಡರಲ್ಲದೆ, 2024ರ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದರು.

247.6 ಸ್ಕೋರ್‌ ಮಾಡಿದ ಪೋಲೆಂಡ್‌ನ ಎಮಿಲಿಯಾ ಬಬ್‌ಸ್ಕಾ ಬೆಳ್ಳಿ ಗೆದ್ದರೆ, ಸ್ವೀಡನ್‌ನ ಅನ್ನಾ ನಾರ್ಮನ್ (225.6) ಕಂಚು ಜಯಿಸಿದರು.

ಅವನಿ ಅವರ ಕೋಚ್‌ಗೆ ವೀಸಾ ನಿರಾಕರಿಸಿದ್ದರಿಂದ ಅವರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಭಾರತ ಕ್ರೀಡಾ ಪ್ರಾಧಿಕಾರ ಮತ್ತು ಕ್ರೀಡಾ ಸಚಿವಾಲಯ ಮಧ್ಯಪ್ರವೇಶಿಸಿ, ಗೊಂದಲ ಬಗೆಹರಿಸಿತ್ತು.

ಕಳೆದ ಆಗಸ್ಟ್‌ನಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವನಿ 10 ಮೀ. ಏರ್ ರೈಫಲ್‌ನಲ್ಲಿ ಬಂಗಾರ ಜಯಿಸಿದ್ದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಒಂದಕ್ಕಿಂತ ಹೆಚ್ಚು ಸಲ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಶೂಟರ್‌ ಎಂಬ ಗೌರವ ಅವರಿಗೆ ಒಲಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT