ಬೆಂಗಳೂರು: ಬ್ಯಾಕ್ಯಾರ್ಡ್ ಅಲ್ಟ್ರಾ ರನ್ ಎಂಬ ಹೊಸ ಮಾದರಿಯ ಮ್ಯಾರಥಾನ್ನಲ್ಲಿ ಕನ್ನಡತಿ ಅಶ್ವಿನಿ ಅವರು ಸುಮಾರು 28 ಗಂಟೆಗಳ ಕಾಲ ಓಡಿ ಮಹಿಳಾ ವಿಭಾಗದಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಬೆಂಗಳೂರಿನ ಕನಕಪುರ ಮಾರ್ಗದ ಹಾರೋಹಳ್ಳಿ ಬಳಿ ಈಚೆಗೆ ನಡೆದ ಬಿಗ್ ಫೂಟ್ ಬ್ಯಾಕ್ಯಾರ್ಡ್ ಅಲ್ಟ್ರಾ ಸ್ಪರ್ಧೆಯಲ್ಲಿ 39 ವರ್ಷ ವಯಸ್ಸಿನ ಅಶ್ವಿನಿ ಅವರು 28 ಗಂಟೆಯಲ್ಲಿ 187.6 ಕಿಲೋಮೀಟರ್ ದೂರ ಕ್ರಮಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಈ ಹಿಂದೆ ನಿರ್ಮಾಣವಾಗಿದ್ದ (27 ಗಂಟೆ) ದಾಖಲೆಯನ್ನು ಮುರಿದಿದ್ದಾರೆ.

ಸ್ಪರ್ಧೆಯಲ್ಲಿ ಒಟ್ಟು 20 ಮಂದಿ ಸ್ಪರ್ಧಿಸಿದ್ದರು. ಅಶ್ವಿನಿ ಮತ್ತು ಮಣಿಪುರದ ಒಪೆಂಡ್ರೋಸಿಂಗ್ ಮಾತ್ರ ರೇಸ್ನಲ್ಲಿ ಕೊನೆಯವರೆಗೆ ಉಳಿದರು. ಅಶ್ವಿನಿ ಅವರು 187.6 ಕಿ.ಮೀ ಕ್ರಮಿಸಿ ಓಟವನ್ನು ನಿಲ್ಲಿಸಿದರು. ಆದರೆ, ಒಪೆಂಡ್ರೋಸಿಂಗ್ ಅವರು 29 ಗಂಟೆ ಓಡಿ ವಿಜೇತರಾದರು. ಆದರೆ, ಅಶ್ವಿನಿ ಅದಾಗಲೇ ಮಹಿಳಾ ವಿಭಾಗದ ದಾಖಲೆಯನ್ನು ಮೀರಿದರು.

ಸಾಗರ ಮೂಲದ ಅಶ್ವಿನಿ ಅವರು ಕಳೆದ ವರ್ಷ ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯಾ ಪೆಸಿಫಿಕ್ ಟ್ರೇಲ್ ರನ್ ಓಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸದ್ಯ ಬೆಂಗಳೂರು ಗಿರಿನಗರದ ನಿವಾಸಿಯಾಗಿರುವ ಅವರು ಮ್ಯಾರಥಾನ್ ಮತ್ತು ಕ್ರೀಡಾಸಕ್ತರಿಗೆ ತರಬೇತಿ ನೀಡುತ್ತಿದ್ದಾರೆ.

ಬ್ಯಾಕ್ ಯಾರ್ಡ್ ಎಂದರೇನು?: ಬ್ಯಾಕ್ ಯಾರ್ಡ್ ಎಂದರೆ ಗಂಟೆಗೆ 6.7 ಕಿ.ಮೀ. ನಂತೆ ಸತತವಾಗಿ ಓಡಬೇಕು. ಈ ಓಟದಲ್ಲಿ ಅತಿ ಹೆಚ್ಚು ಕಾಲ ಹೆಚ್ಚು ದೂರವನ್ನು ಕ್ರಮಿಸಿ ಅಂತಿಮವಾಗಿ ಓಟದಲ್ಲಿ ಉಳಿಯುವ ಒಬ್ಬ ಸ್ಪರ್ಧಿ ವಿಜೇತರಾಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.