ಲಾಸ್ ಏಂಜಲಿಸ್, ಅಮೆರಿಕ : ಅಮೆರಿಕದ ಸಿಮೊನ್ ಬೈಲ್ಸ್ ಎಂದರೆ ಜಿಮ್ನಾಸ್ಟಿಕ್ಸ್ ಕ್ರೀಡೆಯ ‘ರಾಣಿ’ಯೆಂದೇ ಗುರುತಿಸಿಕೊಂಡವರು. ಯಶಸ್ಸಿನ ಉತ್ತುಂಗ ಮತ್ತು ಸೋಲಿನ ಪ್ರಪಾತಗಳೆರಡನ್ನೂ ಕಂಡವರು.

2016ರ ರಿಯೊ ಒಲಿಂಪಿಕ್ಸ್ನಲ್ಲಿ ಆಲ್ರೌಂಡ್, ವಾಲ್ಟ್, ಫ್ಲೋರ್ ಎಕ್ಸೈಜ್ ಮತ್ತು ತಂಡ ವಿಭಾಗಗಳಲ್ಲಿ ಚಿನ್ನ ಗೆದ್ದಿದ್ದರು. ಆದರೆ 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಮಾನಸಿಕ ಖಿನ್ನತೆಯನ್ನು ಮೀರುವ ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಇದೀಗ ಆ ಕಹಿ ನೆನಪುಗಳನ್ನು ಬದಿಗಿಟ್ಟು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ತಮ್ಮ ‘ಗತವೈಭವ’ ಮರಳಿ ಗಳಿಸುವ ಛಲದೊಂದಿಗೆ ಕಣಕ್ಕಿಳಿಯಲಿದ್ದಾರೆ. 27 ವರ್ಷದ ಬೈಲ್ಸ್ ಅವರು ಒಲಿಂಪಿಕ್ಸ್ನಲ್ಲಿ ಭಾಗವಹಿಸಲಿರುವ ಅಮೆರಿಕದ ಅತ್ಯಂತ ಹಿರಿಯ ವಯಸ್ಸಿನ ಮಹಿಳಾ ಜಿಮ್ನಾಸ್ಟ್ ಆಗಿದ್ದಾರೆ.

2016ರ ಒಲಿಂಪಿಕ್ಸ್ನಲ್ಲಿ ಬೈಲ್ಸ್ ಅವರು ತಮ್ಮ ಪ್ರತಿಸ್ಪರ್ಧಿಯಾಗಿದ್ದ ಅಲೈ ರೈಸ್ಮನ್ ಅವರನ್ನು ‘ಅಜ್ಜಿ’ ಎಂದು ಛೇಡಿಸಿದ್ದರು. ಆಗ ಅಲೈಗೆ 22 ವರ್ಷವಾಗಿತ್ತು.

‘ಅಲೈ ಅವರಲ್ಲಿ ನಾನೀಗ ಕ್ಷಮೆಯಾಚಿಸುತ್ತೇನೆ. ಈಗ ನಾನೇ ಹೆಚ್ಚು ವಯಸ್ಸಿನವಳಾಗಿದ್ದೇನೆ’ ಎಂದು ಬೈಲ್ಸ್ ಹೇಳಿದ್ದಾರೆ.

‘ಮಾನಸಿಕ ಸ್ವಾಸ್ಥ್ಯ ಮತ್ತು ದೃಢತೆಗಾಗಿ ಹೆಚ್ಚು ಗಮನ ಕೊಡುತ್ತಿದ್ದೇನೆ. ಪ್ರತಿವಾರವೂ ಥೆರಪಿಯ ತರಗತಿಗಳನ್ನು ತಪ್ಪಿಸುವುದೇ ಇಲ್ಲ. ಅದರಿಂದಾಗಿಯೇ ನಾನು ಮತ್ತೆ ಇಲ್ಲಿಗೆ ಬರಲು ಸಾಧ್ಯವಾಗಿದೆ’ ಎಂದು ಬೈಲ್ಸ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.