ನವದೆಹಲಿ: ಕೋವಿಡ್ ಪಿಡುಗಿನ ಕಾರಣ ದೇಶ ‘ಲಾಕ್ಡೌನ್’ ಆಗಿರುವ ಸಂದರ್ಭದಲ್ಲಿಸ್ಥಗಿತಗೊಂಡಿರುವ ತರಬೇತಿಯನ್ನು ಬಾಕ್ಸರ್ಗಳು ಆನ್ಲೈನ್ ಮೂಲಕ ಪಡೆಯಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ ಬಾಕ್ಸರ್ಗಳಿಗೆ ತಮ್ಮ ಕೋಚ್ಗಳಿಂದಸೋಮವಾರದಿಂದ ಈ ಪ್ರಯೋಜನ ದೊರೆಯಲಿದೆ.

ಭಾರತದ ಮೇರಿ ಕೋಮ್ (51 ಕೆಜಿ ವಿಭಾಗ), ಸಿಮ್ರನ್ಜೀತ್ ಕೌರ್ (60 ಕೆಜಿ), ಲೊವ್ಲಿನಾ ಬೊರ್ಗೋಹೈನ್ (69 ಕೆಜಿ), ಪೂಜಾ ರಾಣಿ (75 ಕೆಜಿ), ಅಮಿತ್ ಪಂಗಲ್ (52 ಕೆಜಿ), ಮನೀಷ್ ಕೌಶಿಕ್ (63 ಕೆಜಿ), ವಿಕಾಸ್ ಕೃಷ್ಣ (69 ಕೆಜಿ), ಆಶಿಶ್ ಕುಮಾರ್ (75 ಕೆಜಿ) ಹಾಗೂ ಸತೀಶ್ ಕುಮಾರ್ (91+ ಕೆಜಿ) (ಒಟ್ಟು 9 ಬಾಕ್ಸರ್ಗಳು) ಟೋಕಿಯೊ ಟಿಕೆಟ್ ಗಿಟ್ಟಿಸಿದ್ದು ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಸದ್ಯ ಪಟಿಯಾಲಾದಲ್ಲಿರುವ ಭಾರತ ಬಾಕ್ಸಿಂಗ್ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಸ್ಯಾಂಟಿಯಾಗೊ ನೀವಾ ಅವರು ಪುರುಷರ ತಂಡಕ್ಕೆ ತರಬೇತಿ ನೀಡಲಿದ್ದಾರೆ’ ಎಂದು ಬಿಎಫ್ಐ ಕಾರ್ಯಕಾರಿ ನಿರ್ದೇಶಕ ಆರ್.ಕೆ. ಸಚೇಟಿ ಹೇಳಿದರು. ಮಹಿಳೆಯರಿಗೆ ಆ ತಂಡದ ಹೈ ಫರ್ಫಾರ್ಮೆನ್ಸ್ ನಿರ್ದೇಶಕ ರಫೆಲ್ ಬರ್ಗ್ಮಾಸ್ಕೊ ತರಬೇತಿ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.