ನವದೆಹಲಿ: ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ತನ್ವಿ ಶರ್ಮಾ, ಉನ್ನತಿ ಹೂಡಾ ಹಾಗೂ ಡಬಲ್ಸ್ ತಾರೆಗಳಾದ ಭಾರ್ಗವ್ ರಾಮ್ ಅರಿಗೆಲ– ವಿಶ್ವ ತೇಜ್ ಗೊಬ್ಬುರು ಅವರು ಗುವಾಹಟಿಯಲ್ಲಿ ಅ. 6ರಿಂದ 19ರ ವರೆಗೆ ನಡೆಯಲಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಏಷ್ಯನ್ ಜೂನಿಯರ್ ಚಾಂಪಿಯನ್ಷಿಪ್ನ ಕಂಚಿನ ಪದಕ ವಿಜೇತ ವೆನ್ನಾಲ ಕಲಗೊಟ್ಲ ಹಾಗೂ ರಕ್ಷಿತಾಶ್ರೀ ಅವರೂ ತಂಡದಲ್ಲಿದ್ದಾರೆ. ಭಾರತವು 2008ರ ನಂತರ ಇದೇ ಮೊದಲ ಬಾರಿ ಈ ಟೂರ್ನಿಯನ್ನು ಆಯೋಜಿಸುತ್ತಿದೆ.

ಗುವಾಹಟಿಯ ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರದಲ್ಲಿ ಅ.6ರಿಂದ 11ರ ವರೆಗೆ ಮಿಶ್ರ ತಂಡ ಚಾಂಪಿಯನ್ಷಿಪ್ (ಸುಹಾಂದಿನಾತ ಕಪ್) ಸ್ಪರ್ಧೆಗಳು ಹಾಗೂ ಅ.13ರಿಂದ 19ರ ವರೆಗೆ ವೈಯಕ್ತಿಕ ಸ್ಪರ್ಧೆಗಳು ನಡೆಯಲಿವೆ.

ಭಾರತದ 25 ಸ್ಪರ್ಧಿಗಳ ತಂಡವನ್ನು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಮಂಗಳವಾರ ಪ್ರಕಟಿಸಿದೆ.

ತಂಡ ಹೀಗಿದೆ:

ಸಿಂಗಲ್ಸ್: ಬಾಲಕರು: ರೌನಕ್ ಚವ್ಹಾಣ್, ಜ್ಞಾನ ದತ್ತು ಟಿ.ಟಿ., ಲಾಲ್ತಜುಯಾಲ ಎಚ್., ಸೂರ್ಯಾಕ್ಷ್ ರಾವತ್. ಬಾಲಕಿಯರು: ತನ್ವಿ ಶರ್ಮಾ, ವೆನ್ನಾಲ ಕಲಗೊಟ್ಲ, ಉನ್ನತಿ ಹೂಡಾ, ರಕ್ಷಿತಾ ಶ್ರೀ ಎಸ್.

ಡಬಲ್ಸ್: ಬಾಲಕರು: ಸುಮಿತ್ ಎ.ಆರ್. –ಭವ್ಯಾ ಛಬ್ರಾ, ಭಾರ್ಗವ್ ರಾಮ್ ಅರಿಗೆಲ– ವಿಶ್ವ ತೇಜ್ ಗೊಬ್ಬುರು, ವಿಷ್ಣು ಕೇಧಾರ್ ಕೋಡೆ– ಮಿಥಿಲೇಶ್ ಪಿ. ಕೃಷ್ಣನ್. ಬಾಲಕಿಯರು: ವೆನ್ನಾಲ ಕಲಗೊಟ್ಟ– ರೇಷಿಕಾ ಯು., ಗಾಯತ್ರಿ ರಾವತ್– ಮಾನಸಾ ರಾವತ್, ಅನನ್ಯಾ ಬಿಷ್ಟ್– ಏಂಜಲ್ ಪುನೆರಾ.

ಮಿಶ್ರ ಡಬಲ್ಸ್: ಭವ್ಯಾ ಛಾಬ್ರಾ– ವಿಶಾಖ ಟಿ., ಲಾಲರಾಮ್ಸಂಗಾ ಸಿ. –ತಾರಿಣಿ ಸೂರಿ, ವಿಷ್ಣು ಕೇಧಾರ್ ಕೋಡೆ– ಕೀರ್ತಿ ಮಂಚಾಲ, ವಂಶ್ ದೇವ್– ಡಿಯಾಂಕಾ ವಾಲ್ಡಿಯಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.