ಟೋಕಿಯೊ: ವಿಶ್ವದ ಅಗ್ರ ಕ್ರಮಾಂಕದ ಆರ್ಚರಿ ಪಟು, ಭಾರತದ ದೀಪಿಕಾ ಕುಮಾರಿ ಅವರು ಒಲಿಂಪಿಕ್ಸ್ ಸಂದರ್ಭದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ. ಆದರೆ ವಿಶ್ವ ಆರ್ಚರಿ ಫೆಡರೇಷನ್ ಈ ಬಾರಿಯ ಕ್ರೀಡಾಕೂಟದಲ್ಲಿ ಒತ್ತಡ ಪತ್ತೆಹಚ್ಚುವ ಕ್ಯಾಮರಾಗಳನ್ನು ನಾಕೌಟ್ ಸುತ್ತುಗಳಲ್ಲಿ ಅಳವಡಿಸಲಿದೆ.

ಯುಮೆನೊಶಿಮಾ ಕ್ರೀಡಾಂಗಣದಲ್ಲಿ ನಡೆಯುವ ಈ ಸುತ್ತುಗಳಲ್ಲಿ ಆರ್ಚರಿ ಪಟುಗಳ ಒತ್ತಡ ಮತ್ತು ಹೃದಯ ಬಡಿತವು ಟಿವಿಗಳಲ್ಲಿ ನೇರಪ್ರಸಾರವಾಗಲಿದೆ. ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಈ ಪ್ರಯೋಗ ನಡೆಯಲಿದೆ.

‘ಪ್ಯಾನಾಸೋನಿಕ್ ಕಂಪನಿಯ ಈ ಆವಿಷ್ಕಾರದ ಅನ್ವಯ, ಬಿಲ್ಲುಗಾರರ ಹೃದಯ ಬಡಿತವನ್ನು ಕ್ಯಾಮರಾಗಳು ಅಳೆಯುತ್ತವೆ ಮತ್ತು ಪ್ರೇಕ್ಷಕರು ನೇರಪ್ರಸಾರದಲ್ಲಿ ಇದನ್ನು ವೀಕ್ಷಿಸಲಿದ್ದಾರೆ’ ಎಂದು ವಿಶ್ವ ಆರ್ಚರಿ ಫೆಡರೇಷನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರ ದತ್ತಾಂಶಗಳು ಆರ್ಚರಿ ಪಟುಗಳಿಗೆ ಗೊತ್ತಾಗುವುದಿಲ್ಲ. ವೈಯಕ್ತಿಕ ವಿಭಾಗದ ಪಂದ್ಯಗಳಿಗೆ ಮಾತ್ರ ಈ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.

ದೀಪಿಕಾ ಕುಮಾರಿ ಅವರು ಸತತ ಮೂರನೇ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. 2012ರ ಲಂಡನ್ ಮತ್ತು 2016ರ ರಿಯೊ ಒಲಿಂಪಿಕ್ಸ್‌ನಲ್ಲೂ ಅವರು ಸ್ಪರ್ಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.