ಬೆಂಗಳೂರು: ಕರ್ನಾಟಕದ ಚಾರ್ವಿ ಅನಿಲ್ಕುಮಾರ್ 10 ವರ್ಷದೊಳಗಿನವರ ರಾಷ್ಟ್ರೀಯ ಚೆಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಜಯಿಸಿದ್ದಾಳೆ.

ಜಮ್ಮುವಿನಲ್ಲಿ ಭಾನುವಾರ ಕೊನೆಗೊಂಡ ಚಾಂಪಿಯನ್ಷಿಪ್ನ ಬಾಲಕಿಯರ ವಿಭಾಗದಲ್ಲಿ ಚಾರ್ವಿ (ಇಎಲ್ಒ 1267) ಅಜೇಯವಾಗುಳಿದಳು. 10 ಸುತ್ತುಗಳಲ್ಲಿ 9.5 ಪಾಯಿಂಟ್ಸ್ ಗಳಿಸಿ, ಒಂದು ಸುತ್ತು ಬಾಕಿ ಇರುವಂತೆಯೇ ಪ್ರಶಸ್ತಿ ಗೆದ್ದುಕೊಂಡಿದ್ದಾಳೆ. ಕರ್ನಾಟಕದ ಆದ್ಯಾ ರಂಗನಾಥ್ (8.5 ಪಾಯಿಂಟ್ಸ್) ಎರಡನೇ ಸ್ಥಾನ ಗಳಿಸಿದ್ದಾಳೆ. ಸಿದ್ಧಿ ಎಸ್. ರಾವ್ ಮತ್ತು ಕೃಪಾ ಉಕ್ಕಲಿ ಕ್ರಮವಾಗಿ ಐದು ಮತ್ತು ಆರನೇ ಸ್ಥಾನ ಪಡೆದಿದ್ದಾರೆ.

ಇಲ್ಲಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾರ್ಥಿಯಾಗಿರುವ 8 ವರ್ಷದ ಚಾರ್ವಿ, 10 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್ಷಿಪ್ಗೆ ಅರ್ಹತೆ ಗಿಟ್ಟಿಸಿದ್ದಾಳೆ.

‘ಚಾರ್ವಿಗೆ ನಟ ದಿ. ಪುನೀತ್ ರಾಜ್ಕುಮಾರ್ ಎಂದರೆ ತುಂಬ ಇಷ್ಟ. ಪ್ರಶಸ್ತಿಯನ್ನು ಅವರಿಗೆ ಅರ್ಪಿಸಿದ್ದಾಳೆ‘ ಎಂದು ಚಾರ್ವಿ ತಂದೆ ಅನಿಲ್ ಕುಮಾರ್ ಹೇಳಿದ್ದಾರೆ. ಅನಿಲ್ಕುಮಾರ್ ಶ್ರವಣಬೆಳಗೊಳದ ಜಿನ್ನೇನಹಳ್ಳಿಯವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.