ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಚೆಸ್ ಪ್ರತಿಭೆಗಳು, ಮೈಸೂರಿನಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ಏಳು ವರ್ಷದೊಳಗಿನವರ ಚೆಸ್ ಚಾಂಪಿಯನ್ಷಿಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಜಿಲ್ಲೆಯ ವಿವಾನ್ ವರ್ಧನ್ ಸಾಹು, ಯುವನ್ನಾಯಕ್ ಬಿ ಮತ್ತು ರಿತ್ವಿಕ್ ಡಿ. ಅವರು ಓಪನ್ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಗಳಿಸಿದ್ದಾರೆ.

ಕೃಷ್ಣಮೂರ್ತಿಪುರಂನ ಬಿಎಸ್ಎಸ್ ವಿದ್ಯಾಲಯದಲ್ಲಿ ನಡೆದ ಟೂರ್ನಿಯಲ್ಲಿ ವಿವಾನ್ ಎಂಟು ಸುತ್ತುಗಳಿಂದ 7.5 ಪಾಯಿಂಟ್ಸ್ ಸಂಗ್ರಹಿಸಿ ಅಜೇಯನಾಗುಳಿದ.ಯುವನ್ನಾಯಕ್ ಏಳು ಅಂಕ ಗಳಿಸಿದರೆ, ರಿತ್ವಿಕ್ ಆರು ಅಂಕ ಗಳಿಸಿದ್ದ. ಈ ವಿಭಾಗದಲ್ಲಿ 70 ಮಂದಿ ಕಣದಲ್ಲಿದ್ದರು.

ಬಾಲಕಿಯರ ವಿಭಾಗದಲ್ಲಿ ಸಾನ್ವಿ ಸಂತೋಷ್ ಅಂಗಡಿ, ದಿಶಾನಿ ಎಸ್. ಮತ್ತು ದ್ವಿಜಾ ಆನಂದ್ ಅವರು ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದ್ದಾರೆ. ಈ ಮೂವರೂ ತಲಾ ಆರು ಪಾಯಿಂಟ್ಸ್ ಗಳಿಸಿದ್ದು, ಉತ್ತಮ ಟೈಬ್ರೇಕರ್ ಆಧಾರದಲ್ಲಿ ಸ್ಥಾನ ನಿರ್ಧರಿಸಲಾಯಿತು.

ಬಾಲಕಿಯರ ವಿಭಾಗದಲ್ಲಿ 45 ಮಂದಿ ಕಣದಲ್ಲಿದ್ದು, 15 ಮಂದಿ ಬೆಂಗಳೂರು ನಗರ ಜಿಲ್ಲೆಯವರು ಎಂದು ನಗರ ಜಿಲ್ಲೆ ಚೆಸ್ ಸಂಸ್ಥೆ ಅಧ್ಯಕ್ಷೆ ಸೌಮ್ಯಾ ಎಂ.ಯು. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.