ಚಾಂಗ್ಝೌ (ಚೀನಾ): ಸೀನಿಯರ್ ಹಂತದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದ ಉನ್ನತಿ ಹೂಡಾ ಅವರು ಗುರುವಾರ ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಅವರಿಗೆ ಆಘಾತ ನೀಡಿದರು.

ಮೂರು ಗೇಮ್ಗಳವರೆಗೆ ಬೆಳೆದ ಪಂದ್ಯದಲ್ಲಿ 17 ವರ್ಷ ವಯಸ್ಸಿನ ಉನ್ನತಿ 21–16, 19–21, 21–13 ರಿಂದ ಸ್ವದೇಶದ ಅನುಭವಿ ಸಿಂಧು ಅವರನ್ನು ಮಣಿಸಿದರು. 73 ನಿಮಿಷಗಳಲ್ಲಿ ಗೆದ್ದ ಉನ್ನತಿ ಇದೇ ಮೊದಲ ಬಾರಿ ಸೂಪರ್ 1000 ಮಟ್ಟದ ಟೂರ್ನಿಯೊಂದರಲ್ಲಿ ಎಂಟರ ಘಟ್ಟ ತಲುಪಿದರು.

ಈ ಹಿಂದೆ, ಸೂಪರ್ 100 ಮಟ್ಟದ ಎರಡು ಟೂರ್ನಿಗಳಲ್ಲಿ ಗೆದ್ದಿರುವ ರೋಹ್ತಕ್ನ ಆಟಗಾರ್ತಿ ಎಂಟರ ಘಟ್ಟದ ಪಂದ್ಯದಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ಅಕಾನೆ ಯಮಾಗುಚಿ ಅವರನ್ನು ಎದುರಿಸಲಿದ್ದಾರೆ.

ಮೂರನೇ ಶ್ರೆಯಾಂಕದ ಅಕಾನೆ ಇನ್ನೊಂದು ಪಂದ್ಯದಲ್ಲಿ ಥಾಯ್ಲೆಂಡ್ನ ಬುಸಾನನ್ ಒಂಗ್ಬಾಮ್ರುಂಗ್ಫಾನ್ ಅವರನ್ನು 21–14, 21–17 ರಿಂದ ಪರಾಭವಗೊಳಿಸಿದರು.

ವಿಶ್ವದ ಆರನೇ ಕ್ರಮಾಂಕದ ಆಟಗಾರ್ತಿ ಟೊಮೊಕಾ ಮಿಯಾಜಾಕಿ ಅವರನ್ನು ಮೊದಲ ಸುತ್ತಿನಲ್ಲಿ ಸೋಲಿಸಿದ್ದ ಸಿಂಧು ಇಲ್ಲಿ ವಿಶ್ವಾಸದೊಡನೆ ಕಣಕ್ಕಿಳಿದಿದ್ದರು. ಆದರೆ, ಹದಿಹರೆಯದ ಎದುರಾಳಿಯ ವೇಗ, ನಿಖರ ಹೊಡೆತಗಳು ಮತ್ತು ದಣಿವರಿಯದ ಆಟದ ಎದುರು ಮಣಿಯಬೇಕಾಯಿತು.

ಈ ಮೂಲಕ, ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿ ಅಂತರರಾಷ್ಟ್ರೀಯ ಟೂರ್ನಿಯೊಂದರಲ್ಲಿ ಸಿಂಧು ಸ್ವದೇಶದ ಆಟಗಾರ್ತಿಗೆ ಸೋತಂತೆ ಆಗಿದೆ. 2018ರಲ್ಲಿ ಅವರು ಕಾಮನ್ವೆಲ್ತ್ ಗೇಮ್ಸ್ ಫೈನಲ್ನಲ್ಲಿ ಸೈನಾ ನೆಹ್ವಾಲ್ ಅವರಿಗೆ ಮಣಿದಿದ್ದರು.

ಸಾತ್ವಿಕ್– ಚಿರಾಗ್ ಮುನ್ನಡೆ:

ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ –ಚಿರಾಗ್ ಶೆಟ್ಟಿ ಜೋಡಿ ಎರಡನೇ ಸುತ್ತಿನ ಪಂದ್ಯದಲ್ಲಿ 21–19, 21–19 ರಿಂದ ಎಂಟನೇ ಶ್ರೇಯಾಂಕದ ಲಿಯೊ ರೋಲಿ ಕರ್ನಾಂಡೊ– ಬಗಾಸ್ ಮೌಲಾನಾ ಅವರನ್ನು ಸೋಲಿಸಿ ಎಂಟರ ಘಟ್ಟ ತಲುಪಿತು.

ಹೊರಬಿದ್ದ ಪ್ರಣಯ್

ಆದರೆ ಎಸ್.ಎಸ್. ಪ್ರಣಯ್ ಸವಾಲು ಅಂತ್ಯಗೊಂಡಿತು. 65 ನಿಮಿಷಗಳವರೆಗೆ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರ 21–18, 15–21, 8–21 ರಲ್ಲಿ ಆರನೇ ಶ್ರೇಯಾಂಕದ ಚೌ ಟಿಯೆನ್ ಚೆನ್ (ಚೀನಾ ತೈಪೆ) ಅವರೆದುರು ಸೋಲನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.