ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ನೂಕರ್‌ ಚಾಂಪಿಯನ್‌ಷಿಪ್‌: ರಿಕ್ಟರ್‌ಗೆ ಕಿರೀಟ

Published : 27 ಆಗಸ್ಟ್ 2024, 16:26 IST
Last Updated : 27 ಆಗಸ್ಟ್ 2024, 16:26 IST
ಫಾಲೋ ಮಾಡಿ
Comments

ಬೆಂಗಳೂರು: ಜರ್ಮನಿಯ ಕ್ರಿಸ್ಟಿಯನ್ ರಿಕ್ಟರ್ ಅವರು ಐಬಿಎಸ್‌ಎಫ್‌ ವಿಶ್ವ 17 ವರ್ಷದೊಳಗಿನವರ ಸ್ನೂಕರ್‌ ಚಾಂಪಿಯನ್‌ಷಿಪ್‌ನ ಕಿರೀಟವನ್ನು ಮುಡಿಗೇರಿಸಿಕೊಂಡರು.

ಕರ್ನಾಟಕ ರಾಜ್ಯ ಬಿಲಿಯಡ್ಸ್‌ ಸಂಸ್ಥೆಯಲ್ಲಿ ಮಂಗಳವಾರ ನಡೆದ ಫೈನಲ್‌ನಲ್ಲಿ 4-1ರಿಂದ (78 (44)-20, 71 (67)-22, 14-78, 68-16, 82-21) ಥಾಯ್ಲೆಂಡ್‌ನ ಲೊಮ್‌ನಾ ಇಸ್ಸಾರಂಗ್‌ಕುನ್‌ ಅವರನ್ನು ಸೋಲಿಸಿದರು. ಎರಡು ಬಾರಿ ಜರ್ಮನ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ರಿಕ್ಟರ್ ಅವರಿಗೆ ಇದು ಚೊಚ್ಚಲ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿದೆ.

ಮಹಿಳೆಯರ 21 ವರ್ಷದೊಳಗಿನವರ ವಿಭಾಗದ ಸೆಮಿಫೈನಲ್‌ ಪಂದ್ಯಗಳಲ್ಲಿ ಭಾರತದ ನತಾಶಾ ಚೇತನ್ 3-0ಯಿಂದ (62-57, 69 (31)-29, 56-50) ಹಾಂಗ್‌ಕಾಂಗ್‌ನ ಚಾನ್ ವಾಯ್ ಲಾಮ್ ಅವರನ್ನು ಸೋಲಿಸಿ ಫೈನಲ್‌ ಪ್ರವೇಶಿಸಿದರು. ಮತ್ತೊಂದು ಪಂದ್ಯದಲ್ಲಿ ಥಾಯ್ಲೆಂಡ್‌ನ ನರುಚಾ ಫೀಮ್‌ಫುಲ್ 3-0ಯಿಂದ (76-17, 65-48 (34), 57-7) ಭಾರತದ ಆರ್‌.ಟಿ.ಮೋಹಿತಾ ಅವರನ್ನು ಹಿಮ್ಮೆಟ್ಟಿಸಿದರು.

ಪುರುಷರ 21 ವರ್ಷದೊಳಗಿನವರ ವಿಭಾಗದ ಪಂದ್ಯದಲ್ಲಿ ಭಾರತದ ರಾಹುಲ್ ವಿಲಿಯಮ್ಸ್ 3–0ಯಿಂದ (71-54, 79-67, 79-61)ಯಿಂದ ಸ್ವದೇಶದ ಜುಬಿನ್ ಜಹೀರ್ ಅವರನ್ನು ಸೋಲಿಸಿದರು. ಭಾರತದ ರಣವೀರ್ ದುಗ್ಗಲ್ 3–1ರಿಂದ (65-7, 56-74 (67), 72-26,78-0) ಜರ್ಮನಿಯ ಪೌಲ್ ಆರ್ಥರ್ ಜೆರೋಚ್ ಅವರನ್ನು ಮಣಿಸಿದರು.

ಭಾರತದ ಶಾಮ್ ಅಲ್ವಿನ್ 3-2ರಿಂದ (57-49, 54-38, 25-71, 8-56, 45-25) ಒಮನ್‌ನ ಮುತಾಸಿಮ್ ಅಲ್ ಸಾದಿ ಅವರನ್ನು; ಭಾರತದ ಜಬೇಜ್ ನವೀನ್ ಕುಮಾರ್ 3-2ರಿಂದ (30-60, 85 (62)-0, 51-9, 52-56, 74-17) ಇರಾನ್‌ನ ಪರ್ಹಮ್ ಅವರನ್ನು ಮಣಿಸಿದರು.

ಭಾರತದ ಮೊಹಮ್ಮದ್ ಮುಸ್ತಫಾ, ಭವ್ಯ ಪಿಪಾಲಿಯಾ, ಆರವ್ ಸಂಚೇತಿ ಅವರು ತಮ್ಮ ವಿಭಾಗದ ಸುತ್ತಿನಲ್ಲಿ ಪರಾಭವಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT