ನವದೆಹಲಿ:ಸರ್ಕಲ್ ಸ್ಟೈಲ್ ಕಬಡ್ಡಿ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲಿಭಾರತದ್ದು ಎನ್ನಲಾದ ತಂಡದ ವಿರುದ್ಧ ಜಯ ಸಾಧಿಸಿದ ಪಾಕಿಸ್ತಾನ, ಚಾಂಪಿಯನ್ ಎನಿಸಿತು.ಲಾಹೋರ್ನಲ್ಲಿಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ 43–41 ಅಂತರದಿಂದ ಜಯಿಸುವ ಮೂಲಕ ಇದೇ ಮೊದಲ ಬಾರಿಗೆ ವಿಶ್ವಕಪ್ ಗೆಲುವಿನ ಸಂಭ್ರಮ ಆಚರಿಸಿತು.

ಈ ಸಂಬಂಧಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವಿಟರ್ ಮೂಲಕ ತಮ್ಮ ತಂಡದ ಬೆನ್ನು ತಟ್ಟಿದ್ದಾರೆ. ‘ಭಾರತವನ್ನು ಸೋಲಿಸಿ ವಿಶ್ವಕಪ್ ಗೆದ್ದುಕೊಂಡಿರುವ ಪಾಕಿಸ್ತಾನ ತಂಡಕ್ಕೆ ಅಭಿನಂದೆನೆಗಳು’ ಎಂದು ಬರೆದುಕೊಂಡಿದ್ದಾರೆ.

ಆದರೆ, ಭಾರತೀಯ ಒಲಿಂಪಿಕ್ ಒಕ್ಕೂಟ (ಐಒಎ) ಮತ್ತು ಭಾರತ ಕಬಡ್ಡಿ ಫೆಡರೇಷನ್ (ಎಕೆಎಫ್ಐ) ಪಾಕಿಸ್ತಾನಕ್ಕೆ ಯಾವುದೇ ತಂಡವನ್ನು ಕಳುಹಿಸಿಕೊಟ್ಟಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿತ್ತು. ಮಾತ್ರವಲ್ಲದೆ, ಆ ತಂಡವುಭಾರತದ ಹೆಸರು ಮತ್ತುದೇಶದ ಧ್ವಜವನ್ನು ಬಳಸದಂತೆ ಎಚ್ಚರಿಕೆ ನೀಡಿತ್ತು.

ಇದನ್ನೂ ಓದಿ:ಕಬಡ್ಡಿ ಆಡಲು ಪಾಕಿಸ್ತಾನ ತಲುಪಿದ ‘ಭಾರತ ತಂಡ’: ಅಚ್ಚರಿಗೊಂಡ ಕ್ರೀಡಾ ಇಲಾಖೆ

ಫೈನಲ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಕ್ರೀಡಾ ಇಲಾಖೆಗೆ ಪತ್ರ ಬರೆದಿದ್ದಎಕೆಎಫ್ಐ,ಅನಧಿಕೃತ ತಂಡಕ್ಕೆ ಅವಕಾಶ ನೀಡಬಾರದು. ಫೈನಲ್ ಪಂದ್ಯದ ವೇಳೆ ಆ ತಂಡವುಭಾರತದ ಧ್ವಜವನ್ನು ಬಳಸುವುದಕ್ಕೆ ಸಂಬಂಧಿಸಿದಂತೆ ಕ್ರೀಡಾ ಇಲಾಖೆಯು ತನಿಖೆ ನಡೆಸುತ್ತಿದೆ ಎಂದು ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.